ಬೆಳೆ ಸಮೀಕ್ಷೆಗೆ ಮೊಬೈಲ್ ಆ್ಯಪ್‌ ಬಿಡುಗಡೆ

ಬೆಳೆ ಸಮೀಕ್ಷೆಗೆ ಮೊಬೈಲ್ ಆ್ಯಪ್‌ ಬಿಡುಗಡೆ

ರಾಣೇಬೆನ್ನೂರು, ಆ.13- ರೈತರಿಗಾಗಿ ಬೆಳೆ ಸಮೀಕ್ಷೆಗೆ ಮೊಬೈಲ್ ಆಪ್ ಅನ್ನು ಶಾಸಕ ಅರುಣ ಕುಮಾರ ಗುತ್ತೂರು ಬಿಡುಗಡೆ ಮಾಡಿ ಮಾತನಾಡಿ, ರೈತಪರ ಇರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕೈಗೊಳ್ಳುವ ಎಲ್ಲಾ ಕಾರ್ಯಕ್ರಮಗಳ ಪ್ರಯೋ ಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ರೈತರಿಂದ ರೈತರಿಗೋಸ್ಕರ ತಯಾರಿಸಲಾದ ಈ ಆಪ್‌ಗೆ ನಿಮ್ಮ ಮೊಬೈಲ್‌ನಲ್ಲಿಯೇ ನೀವು ಬೆಳೆದ ಬೆಳೆಯ ಫೋಟೋ ತೆಗೆದು ಕಳಿಸಿ, ಬೆಳೆ ಸಮೀಕ್ಷೆ ಮಾಡಲಾಗುತ್ತದೆ. ಈ ಆಪ್‌ನಿಂದ ಬೆಳೆ ವಿಮೆ, ಬೆಂಬಲ ಬೆಲೆ, ಕೃಷಿ ಸಾಲ ಮುಂತಾದ ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗಲಿದೆ. ರೈತರು ಸ್ವಾಭಿಮಾನಿಗಳಾಗಲು ಇದು ಸಹಕಾರಿಯಾಗಲಿದೆ. ಇದು ಸರ್ಕಾರದ ಅತ್ಯಂತ ಮಹತ್ವದ ಕೊಡುಗೆ ಎಂದು ಕೃಷಿ ಇಲಾಖೆ ಉಪನಿರ್ದೇಶಕರಾದ ಜಿ.ಎಸ್.ಸ್ಫೂರ್ತಿ  ಹೇಳಿದರು.

ಈ ವರ್ಷದ ಬೆಳೆ ಸಮೀಕ್ಷೆಗೆ, ರೈತರು ಇದೇ ತಿಂಗಳು 24 ರವರೆಗೆ ಅಪ್‌ಲೋಡ್ ಮಾಡಲು ಅವಕಾಶವಿದೆ. ನಂತರದಲ್ಲಿ ಸರ್ಕಾರ ನೇಮಿಸಿರುವ ಸ್ಥಳೀಯ ಖಾಸಗಿ ಪ್ರತಿನಿಧಿಗಳು ಮಾಡುವರು. ರೈತರು ತಮಗೆ ಅತ್ಯಂತ ಉಪಯುಕ್ತವಾದ ಈ ಆಪ್‌ನ ಉಪಯೋಗವನ್ನು ಪರಿಣಾಮಕಾರಿಯಾಗಿ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.

ಕರೂರು ಗ್ರಾಮದ ಅಜ್ಜನಗೌಡ ಕನ್ನಗೌಡ್ರ ಜಮೀನಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕರೂರಿನ ನಾಗರಾಜ್‌ ಚಳಗೇರಿ, ಮಾಕನೂರಿನ ಚಂದ್ರೇಗೌಡ ಭರಮಗೌಡ್ರು, ಇಲಾಖೆ ಅಧಿಕಾರಿಗಳಾದ ಜಿ.ಎಂ.ಬತ್ತಿಕೊಪ್ಪ, ಮಹ್ಮದ್‌ ರಿಜ್ವಾನ್‌, ಕೇಶವನಾಯ್ಕ ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published.