175 ಅಡಿ ತಲುಪಿದ ಭದ್ರಾ ಜಲಾಶಯ

ಶಿವಮೊಗ್ಗ, ಆ. 11 – ಮಲೆನಾಡಿನಲ್ಲಿ ಮಳೆ ಕ್ಷೀಣಿಸಿದ್ದು, ತುಂಗಾ, ಭದ್ರಾ ನದಿಗಳಲ್ಲಿ ನೀರಿನ ಹರಿವು ಮಂಗಳವಾರ ಮತ್ತೊಷ್ಟು ಕಡಿಮೆ ಆಗಿದೆ. ಗಾಜನೂರಿನ ತುಂಗಾ ಜಲಾಶಯಕ್ಕೆ 23 ಸಾವಿರ ಕ್ಯೂಸೆಕ್ಸ್ ಬಳ ಹರಿವು ಇದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗಿದೆ. ಇದರಿಂದಾಗಿ ತುಂಗಭದ್ರಾ ನದಿ ಸಹಜ ಸ್ಥಿತಿಗೆ ಬರಲಾರಂಭಿಸಿದೆ. ಇತ್ತ ಭದ್ರಾ ಜಲಾಶಯಕ್ಕೂ ಹರಿವು ಗಣನೀಯವಾಗಿ ಇಳಿಕೆ ಕಂಡಿದೆ. ಮಂಗಳ ವಾರ ಬೆಳಿಗ್ಗೆ 16,453 ಕ್ಯೂಸೆಕ್ಸ್ ಇದ್ದ ನೀರಿನ ಬಹಳ ಹರಿವು ಸಂಜೆ 12,720 ಕ್ಯೂಸೆಕ್ಸ್‍ಗೆ ಇಳಿದಿತ್ತು.ಜಲಾಶಯದ ನೀರಿನ ಮಟ್ಟ 175 ಅಡಿಗೆ ತಲುಪಿದೆ. ಜಲಾಶಯ ಭರ್ತಿಗೆ 11 ಅಡಿ ಬಾಕಿ ಉಳಿದಿದೆ.

Leave a Reply

Your email address will not be published.