ಫೇಸ್ ಬುಕ್ ಖಾತೆದಾರನ ವಿರುದ್ಧ ದೂರು

ದಾವಣಗೆರೆ, ಆ.10- ಪ್ರಧಾನ ಮಂತ್ರಿ, ಕೇಂದ್ರ ಗೃಹ ಸಚಿವ ಹಾಗೂ ಮುಖ್ಯಮಂತ್ರಿ ಇವರುಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾದ ಮತ್ತು ಅಸಹ್ಯವಾದ ಫೋಟೋಗಳನ್ನು ಷೇರ್ ಮಾಡಿದ ವ್ಯಕ್ತಿಯ ವಿರುದ್ಧ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಇಂದು ಪ್ರಕರಣ ದಾಖಲಿಸಲಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮೀತ್ ಷಾ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತೇಜೋವಧೆ ಮಾಡುವ ಉದ್ದೇಶದಿಂದ ಅವರುಗಳ ಮುಖದ ಭಾವಚಿತ್ರಗಳನ್ನು ಬೇರೆ ಪ್ರಾಣಿಗಳ ಹಾಗೂ ಮಹಿಳೆಯರ ಅಶ್ಲೀಲವಾದ ಫೋಟೋಗಳಿಗೆ ಎಡಿಟ್ ಮಾಡಿ ಫೇಸ್ ಬುಕ್‌ನಲ್ಲಿ ಅಪ್ ಲೋಡ್ ಮಾಡಿದ ಪೋಸ್ಟರ್ ಗಳನ್ನು ನವೀನ ಜಿ.ಹೆಚ್. ನವೀನ ಎಂಬ ಹೆಸರಿನ ಫೇಸ್ ಬುಕ್ ಖಾತೆದಾರ ಷೇರ್ ಮಾಡಿ ಬಿಜೆಪಿ ಕಾರ್ಯಕರ್ತರ ಮನಸ್ಸಿಗೆ ನೋವುಂಟು ಮಾಡಿದ್ದು, ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿವಮೂರ್ತಿ ಎಂಬಾತ ದೂರು ನೀಡಿದ್ದಾರೆ.

ದೂರಿನ ಮೇರೆಗೆ ಪ್ರಕರಣದ ಆರೋಪಿ ನವೀನ ಜಿ.ಹೆಚ್. ನವೀನ ಎಂಬ ಹೆಸರಿನ ಖಾತೆದಾರ ನವೀನ್ ಬೈರನಹಳ್ಳಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Leave a Reply

Your email address will not be published.