ನಿಜವಾದ ಹೀರೋಗಳು

ನಿಜವಾದ ಹೀರೋಗಳು

ಸುರಕ್ಷಿತವಾಗಿದೆ ನಮ್ಮ ದೇಶ
ಕಾಯುತ್ತಿರುವ ನಮ್ಮ ಸೈನಿಕನೇ  ಈಶ
ಸೈನಿಕರಿಗೆ ಜೈ ಎನ್ನಿರೀ
ಎದುರಾಳಿ ಯಾರೇ ಆಗಿರಲಿ.

ನಮ್ಮ ಸೈನಿಕರಿಗೆ ಯಾರಿದ್ದಾರೆ ಸಮಾನ
ತೋರುತ್ತಾರೆ ಅವರ ಪೌರುಷ ಕೊನೆವರೆಗೂ
ವೈರಿಗಳನ್ನು ಬಗ್ಗು ಬಡಿವವರಿಗೂ.

ತಮ್ಮ ಪ್ರಾಣ ಪಣಕ್ಕಿಡುತ್ತಾರೆ ಸೈನಿಕರು
ಹಿಮವಾಗಲಿ, ಬಿಸಿಲಾಗಲಿ ಧೃತಿಗೆಡರು
ಅವರೇ ಕೆಚ್ಚೆದೆಯ ವೀರರು.

ದೇಶಸೇವೆಗಾಗಿ ಮುಡಿಪು
ನಮ್ಮ ಗಡಿಯ ಭದ್ರತೆಯ ಅವರ ಧ್ಯೇಯ
ಇಂತಹ ಸೈನಿಕರನ್ನು ಪಡೆದ ನಾವೇ ಧನ್ಯ.

ಜೈ ಜವಾನ್ ಜೈ ಕಿಸಾನ್
ಎಂಬ ಮಾತೇ ನಮ್ಮ ಮಂತ್ರ
ಇವರೇ ನಮ್ಮ ದೇಶದ ಎರಡು ಕಣ್ಣುಗಳು.

ರೈತ ಹಸಿವು ನೀಗಿಸುವ ದೇವರು
ಸೈನಿಕ ದೇಶ ಕಾಯೋ ದೇವರು
ಇವರಿಗೆ ಸಿಕ್ಕರೆ ಪುರಸ್ಕಾರ
ನಮ್ಮ ಜೀವನವೇ ಸಂತೋಷದ ಆಗರ.


ಕೋಮಲ ವಸಂತ್ ಕುಮಾರ್
ದಾವಣಗೆರೆ.