ಕುಂಬಳೂರಿನಲ್ಲಿ ಮತ್ತೆ ನಾಲ್ವರಿಗೆ ಸೋಂಕು

ಕುಂಬಳೂರಿನಲ್ಲಿ ಮತ್ತೆ ನಾಲ್ವರಿಗೆ ಸೋಂಕು

ಮಲೇಬೆನ್ನೂರು, ಆ.6- ಕುಂಬಳೂರು ಗ್ರಾಮದಲ್ಲಿ ಗುರುವಾರ ಮತ್ತೆ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಗ್ರಾಮದಲ್ಲಿ ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಈಗಾಗಲೇ ಗುರುತಿಸಿರುವ ಕಂಟೈನ್‌ಮೆಂಟ್ ಝೋನ್‌ನಲ್ಲಿ 40 ವರ್ಷ ಮೆಲ್ಪಟ್ಟ ಮೂವರು ಮಹಿಳೆಯರಿಗೆ ಹಾಗೂ 84 ವರ್ಷದ ವೃದ್ಧರೊಬ್ಬರಿಗೆ ಸೋಂಕು ದೃಢಪಟ್ಟಿದೆ.

ಉಪತಹಶೀಲ್ದಾರ್ ಆರ್.ರವಿ, ಇನ್ಫಿಡೆಂಟ್ ಕಾಮಾಂಡರ್ ಪೂನಂ, ಗ್ರಾಮಲೆಕ್ಕಾಧಿಕಾರಿ ಶ್ರೀಧರ್, ಗ್ರಾ.ಪಂ. ಕಾರ್ಯದರ್ಶಿ ಸೋಮಶೇಖರ್, ಆರೋಗ್ಯ ಇಲಾಖೆಯ ಕಿರಣ್ ಮತ್ತು ಆಶಾ ಕಾರ್ಯಕರ್ತೆಯರು ಕಂಟೈನ್‌ಮೆಂಟ್ ಝೋನ್‌ಗಳಿಗೆ ತೆರಳಿ, ವೃದ್ಧರಿಗೆ, ದುರ್ಬಲರಿಗೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಮನವೊಲಿಸಿದರು.

ಮಲೇಬೆನ್ನೂರು : ಗುರುವಾರ ಇಲ್ಲಿನ 14ನೇ ವಾರ್ಡಿನ ಗೌಸ್ ನಗರದ 34 ವರ್ಷದ ಮಹಿಳೆಗೆ ಮತ್ತು ಬುಧವಾರ 1ನೇ ವಾರ್ಡಿನ ದರ್ಗಾ ರಸ್ತೆಯಲ್ಲಿ ಈಗಾಗಲೇ ಸೀಲ್‌ಡೌನ್ ಆಗಿರುವ ಮನೆಯಲ್ಲಿ ಮಹಿಳೆಯೊಬ್ಬರಿಗೆ ಸೋಂಕು ಕಾಣಿಸಿಕೊಂಡಿದ್ದು, ಪಟ್ಟಣದಲ್ಲಿ ಸೋಂಕಿತರ ಸಂಖ್ಯೆ 44 ಆಗಿದೆ.

Leave a Reply

Your email address will not be published.