ಕುಂಬಳೂರು : ತಪಾಸಣೆ, ಟೆಸ್ಟ್‌ಗೆ ಒಪ್ಪಿದ ಗ್ರಾಮಸ್ಥರು

ಕುಂಬಳೂರು : ತಪಾಸಣೆ, ಟೆಸ್ಟ್‌ಗೆ ಒಪ್ಪಿದ ಗ್ರಾಮಸ್ಥರು

ಮಲೇಬೆನ್ನೂರು, ಆ. 5-ಕುಂಬಳೂರು ಗ್ರಾಮದಲ್ಲಿ ಇದುವರೆಗೆ  7 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, 3 ಕಂಟೈನ್‌ಮೆಂಟ್ ಜೋನ್‌ಗಳನ್ನು ಗುರುತಿಸಲಾಗಿದೆ.

ಕಂಟೈನ್‌ಮೆಂಟ್ ಜೋನ್‌ಗಳಲ್ಲಿರುವ ವೃದ್ಧರು ಮತ್ತು ದುರ್ಬಲರನ್ನು ಆರೋಗ್ಯ ತಪಾಸಣೆ ಹಾಗೂ ಕೊರೊನಾ ಟೆಸ್ಟ್ ಮಾಡಲು ಹೋದಾಗ ಕೆಲವರು ವಿರುದ್ಧ ವ್ಯಕ್ತಪಡಿಸಿದ್ದರು.

ಆರೋಗ್ಯ ಇಲಾಖೆಯವರ ಮನವಿ ಮೇರೆಗೆ ಬುಧವಾರ ಗ್ರಾ.ಪಂ. ಸಭಾಂಗಣದಲ್ಲಿ ಗ್ರಾಮದ ಮುಖಂಡರ, ಗ್ರಾ.ಪಂ. ಮಾಜಿ ಸದಸ್ಯರ ಸಭೆ ನಡೆಸಿದ ಉಪ ತಹಶೀಲ್ದಾರ್ ಆರ್. ರವಿ ಅವರು ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿದರು. ಆಗ ಗ್ರಾಮಸ್ಥರು ಕೆಲ ವರು ನಮಗೆ ಸರಿಯಾಗಿ ಮಾಹಿತಿ ನೀಡದೆ ನಿರ್ಲಕ್ಷ್ಯದಿಂದ ನಡೆದುಕೊಳ್ಳು ತ್ತಿದ್ದಾರೆಂದು ಆರೋಗ್ಯ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯೊಬ್ಬರ ವಿರುದ್ಧ ದೂರಿದರು.

ಆಗ ವೈದ್ಯಾಧಿಕಾರಿ ಡಾ. ಲಕ್ಷ್ಮೀದೇವಿ ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ದಯವಿಟ್ಟು ಕಂಟೈನ್‌ಮೆಂಟ್ ಜೋನ್‌ನಲ್ಲಿರುವವರು ಆರೋಗ್ಯ ತಪಾಸಣೆ ಹಾಗೂ ರೋಗ ಲಕ್ಷಣಗಳಿದ್ದರೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದಾಗ, ಗ್ರಾಮಸ್ಥರು ಸಮ್ಮತಿ ಸೂಚಿಸಿದರು.

ಕಂದಾಯ ನಿರೀಕ್ಷಕ ಸಮೀರ್, ಪಿಡಿಓ ಚಂದ್ರಶೇಖರ್, ಗ್ರಾಮ ಲೆಕ್ಕಾಧಿಕಾರಿ ಶ್ರೀಧರ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ಮಾತ್ಯೆಂಗೆಮ್ಮ, ಮಾಜಿ ಉಪಾಧ್ಯಕ್ಷ ಹುರುಳಿ ಹನುಮಂತಪ್ಪ, ಮಾಜಿ ಸದಸ್ಯ ಹನುಮಂತಪ್ಪ ಸಾಲಿ, ಗ್ರಾ.ಪಂ. ಕಾರ್ಯದರ್ಶಿ ಸೋಮಶೇಖರಪ್ಪ ಮತ್ತಿತರರು ಸಭೆಯಲ್ಲಿದ್ದರು.

Leave a Reply

Your email address will not be published.