ಸ್ನೇಹ

ಸ್ನೇಹ

ರಕ್ತ ಹಂಚಿಕೊಂಡು
ಹುಟ್ಟಲ್ಲಿಲ್ಲ

ತುತ್ತು ಹಂಚಿಕೊಂಡು
ಬೆಳೆಯಲಿಲ್ಲ

ಆಸ್ತಿಯಲ್ಲಿ ಪಾಲು
ಕೇಳಲಿಲ್ಲ

ಹೊಟ್ಟೆ ಕಿಚ್ಚು ಮತ್ಸರ
ಪಡಲಿಲ್ಲ

ಬಡವ ಬಲ್ಲಿದ
ಎನ್ನಲಿಲ್ಲ

ಜಾತಿ ಮತದ
ಭೇದವಿಲ್ಲ

ಜೀವಕ್ಕೆ ಜೀವ
ಪ್ರಾಣಕ್ಕೆ ಪ್ರಾಣ

ಕೊಡುವ ಈ ಸ್ನೇಹಕ್ಕೆ
ಸ್ನೇಹ ಅಮರ ಅಮರ.


ಹೆಚ್.ಕೆ.ಸತ್ಯಭಾಮ ಮಂಜುನಾಥ್‌
ದಾವಣಗೆರೆ.

Leave a Reply

Your email address will not be published.