ಸಿ. ಸತ್ಯನಾರಾಯಣ ದಂಪತಿಯಿಂದ ಮಕ್ಕಳ ಲೋಕಕ್ಕೆ ಕೊಡುಗೆ

ಸಿ. ಸತ್ಯನಾರಾಯಣ ದಂಪತಿಯಿಂದ ಮಕ್ಕಳ ಲೋಕಕ್ಕೆ ಕೊಡುಗೆ

ದಾವಣಗೆರೆ, ಆ.4- ನಿಟುವಳ್ಳಿಯ ಸಿದ್ಧಗಂಗಾ ಬಡ ಕಾರ್ಮಿಕ ಮಕ್ಕಳ ಲೋಕಕ್ಕೆ ಅಗತ್ಯವಿದ್ದ ಆಟದ ಹಾಗೂ ಪಠ್ಯ ಸಾಮಾನುಗಳನ್ನು ಚನ್ನಗಿರಿ ಮನೆತನದ ಸಿ. ಸತ್ಯನಾರಾಯಣ ದಂಪತಿ ಕೊಡುಗೆಯಾಗಿ ನೀಡಿದರು. ನಿಟುವಳ್ಳಿಯ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ಮೊನ್ನೆ ಹಮ್ಮಿಕೊಂಡಿದ್ದ ಮಾಸ್ಕ್ ವಿತರಿಸುವ ಕಾರ್ಯಕ್ರಮದಲ್ಲಿ ದಂಪತಿ ನೀಡಿದ ಕೊಡುಗೆಯನ್ನು ಸಾನ್ನಿಧ್ಯ ವಹಿಸಿದ್ದ ಶ್ರೀ ಬಸವಪ್ರಭು ಸ್ವಾಮೀಜಿ ಸಂಸ್ಥೆಗೆ ನೀಡಿದರು.

ಮುಖ್ಯ ಅತಿಥಿಗಳಾಗಿ ಮಕ್ಕಳ ಲೋಕ ಸಂಸ್ಥೆಯ ನಿರ್ದೇಶಕ ಹಾಗೂ ಜ್ಞಾನದೀಪ ಪಬ್ಲಿಕ್ ಸ್ಕೂಲ್‌ ಕಾರ್ಯದರ್ಶಿ ಕೆ. ಬಸವರಾಜಪ್ಪ, ಸಂಸ್ಥೆ ನಿರ್ದೇಶಕರೂ, ಕಲಾವಿದರೂ, ಪಾಲಿಕೆಯ ಅಧಿಕಾರಿ ಎಂ. ರುದ್ರಮುನೀಶ್ವರ ಆಗಮಿಸಿ ಮಾತನಾಡಿದರು.

ಮಕ್ಕಳ ಲೋಕದ ಪ್ರಾಚಾರ್ಯ ಹಾಗೂ ಸಂಗೀತ ಗುರುಗಳಾದ ರುದ್ರಾಕ್ಷಿ ಬಾಯಿ ಅವರು ಮಕ್ಕಳಿಗೆ ಭಕ್ತಿಗೀತೆ, ವಚನಗಳು, ಶಾಸ್ತ್ರೀಯ ಸಂಗೀತವನ್ನು ಹೇಳಿಕೊಟ್ಟರು. ಪಿ.ಆರ್. ಐಸಿರಿ ಹಾಡಿದರು. ಮಕ್ಕಳ ಲೋಕದ ಅಧ್ಯಕ್ಷ ಚಿನ್ನಸಮುದ್ರದ ಪುಟ್ಟನಾಯಕ್ ಕಾರ್ಯಕ್ರಮ ಆಯೋಜಿಸಿದ್ದರು. ಮಕ್ಕಳ ಲೋಕ ಸಂಸ್ಥಾಪಕ ಅಧ್ಯಕ್ಷ ಕೆ.ಎನ್. ಸ್ವಾಮಿ ಗೌರವ ಅರ್ಪಿಸಿದರು. 

Leave a Reply

Your email address will not be published.