ಜಿಲ್ಲಾ ವರದಿಗಾರರ ಕೂಟದಿಂದ ಮಾಧ್ಯಮ ಪ್ರಶಸ್ತಿಗೆ ಆಯ್ಕೆ

ದಾವಣಗೆರೆ, ಆ.3- ಜಿಲ್ಲಾ ವರದಿಗಾರರ ಕೂಟದಿಂದ ಪ್ರತಿವರ್ಷ ನೀಡಲಾಗುವ ಮಾಧ್ಯಮ ಪ್ರಶಸ್ತಿಗೆ ಐವರು ಪತ್ರಕರ್ತರು ಆಯ್ಕೆಯಾಗಿದ್ದಾರೆ.

2020ನೇ ಸಾಲಿನ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಯಳನಾಡು ಮಂಜುನಾಥ್, ಸಂಯುಕ್ತ ಕರ್ನಾಟಕದ ರಂಗನಾಥ್, ನ್ಯೂಸ್-18 ವಾಹಿನಿಯ ಹೆಚ್.ಎಂ.ಪಿ.ಕುಮಾರ್, ಬಿ-ಟಿವಿ ಕ್ಯಾಮರಾಮ್ಯಾನ್ ಲೋಕೇಶ್, ದಾವಣಗೆರೆ ಟೈಮ್ಸ್‌ ಪತ್ರಿಕೆಯ ವೀರೇಶ್ ಆಯ್ಕೆಯಾಗಿದ್ದಾರೆ.

ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್.ಆರಾಧ್ಯ ಅಧ್ಯಕ್ಷತೆಯ ಸಮಿತಿಯು ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಪ್ರಶಸ್ತಿಯು 5 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಇದೇ ವರ್ಷ ನಡೆಯುವ ಮಾಧ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನೆರವೇರಲಿದೆ.

Leave a Reply

Your email address will not be published.