ಹಲವಾಗಲು ಸಾರ್ವಜನಿಕ ಆಸ್ಪತ್ರೆ , ನೆಮ್ಮದಿ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ

ಹರಪನಹಳ್ಳಿ, ಆ. 1 – ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ತಾಲ್ಲೂಕಿನ  ಹಲವಾಗಲು ಗ್ರಾಮದ ಸಾರ್ವ ಜನಿಕ ಆಸ್ಪತ್ರೆ ಹಾಗೂ ನೆಮ್ಮದಿ ಕೇಂದ್ರವನ್ನು ಈ ಕ್ಷೇತ್ರದ ಜನರಿಗೆ ಅನುಕೂಲವಾಗುವಂತೆ ಈ ಉಪಕೇಂದ್ರಗಳನ್ನು  ಮೇಲ್ದರ್ಜೆಗೆ ಏರಿಸಿ ಪ್ರತ್ಯೇಕ  ನೆಮ್ಮದಿ ಕೇಂದ್ರವನ್ನಾಗಿ ಮಾಡ ಬೇಕು ಎಂದು  ಹಲವಾಗಲು ಜಿಲ್ಲಾ ಪಂಚಾಯತಿ ಸದಸ್ಯ ರಾದ  ಆರುಂಡಿ ಸುವರ್ಣ ನಾಗರಾಜ್ ಒತ್ತಾಯಿಸಿದ್ದಾರೆ.

ಹಲವಾಗಲು ಜಿಲ್ಲಾ ಪಂಚಾಯತಿ ಕ್ಷೇತ್ರ ಹೆಚ್ಚು ಜನಸಂಖ್ಯೆಯಿಂದ ಕೂಡಿದ್ದು, ಅನೇಕ ಗ್ರಾಮಗಳಿಂದ ಸಾರ್ವಜನಿಕರು, ತಮ್ಮ ಕೆಲಸ ಕಾರ್ಯಗಳಿಗಾಗಿ ಬರುತ್ತಾರೆ. ಕ್ಷೇತ್ರದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಸಾರ್ವಜನಿಕ ಆಸ್ಪತ್ರೆ ಹಾಗೂ ನೆಮ್ಮದಿ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು.

ಈ ಹಿಂದೆ ಈ  ಕ್ಷೇತ್ರ ತೆಲಗಿ ಜಿಲ್ಲಾ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟಿದ್ದು, ಅಭಿವೃದ್ದಿ ಕಾರ್ಯಗಳು ಕುಂಠಿತ ಗೊಂಡಿದ್ದು, ಆಗಿನ ಸರ್ಕಾರ 2016 ರಲ್ಲಿ ಕೇತ್ರ ಮರುವಿಂ ಗಡಣೆ ಮಾಡಿ ಪ್ರತ್ಯೇಕ ನೂತನ ಹಲವಾಗಲು ಜಿಲ್ಲಾ ಪಂಚಾಯತಿ ಕ್ಷೇತ್ರವ ನ್ನಾಗಿ ಮಾಡಿದ ಬಳಿಕ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇನ್ನು ಅಭಿವೃದ್ದಿ ಕಾರ್ಯಗಳು ಆಗಬೇಕಾಗಿವೆ ಎಂದರು.

ಹಲವಾಗಲು ಕ್ಷೇತ್ರದ ಅಭಿವೃದ್ದಿಗೆ ಹಾಗೂ ಇತರೆ ಸರ್ಕಾರಿ ಕಛೇರಿಗಳ ಮೇಲ್ದರ್ಜೆಗಾಗಿ ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲಾ ಪಂಚಾಯತಿಗಳ ಸಾಮಾನ್ಯ ಸಭೆಗಳಲ್ಲಿ ನಾನು ಪ್ರತಿ ಸಾಮಾನ್ಯ ಸಭೆಗಳಲ್ಲಿ ಹಾಗೂ ಕೆ.ಡಿ.ಪಿ.ಸಭೆಗಳಲ್ಲಿ  ಒತ್ತಾಯಿಸುತ್ತಾ ಬಂದಿ ದ್ದೇನೆ. ಅತ್ಯಂತ ಹಿಂದುಳಿದ ಕ್ಷೇತ್ರ ವಾಗಿರುವ ಹಲವಾ ಗಲು ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಬಡವರು,  ಕೂಲಿ ಕಾರ್ಮಿಕರು, ರೈತಾಪಿ ವರ್ಗದವರು, ಮಧ್ಯಮ ವರ್ಗದ ಜನರಿರುವ ಕ್ಷೇತ್ರದಲ್ಲಿ ಸಾರ್ವಜನಿಕರ ಆಸ್ಪತ್ರೆ ಹಾಗೂ ನೆಮ್ಮದಿ ಕೇಂದ್ರವನ್ನು ಸರ್ಕಾರ ಮೇಲ್ದರ್ಜೆಗೆ ಏರಿಸ ಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ತಿಳಿಸಿದರು.

Leave a Reply

Your email address will not be published.