ಹರಪನಹಳ್ಳಿಯಲ್ಲಿ ಅಗ್ನಿಶಾಮಕ ದಳದ ನೂತನ ಕಚೇರಿ ಉದ್ಘಾಟನೆ

ಹರಪನಹಳ್ಳಿಯಲ್ಲಿ ಅಗ್ನಿಶಾಮಕ ದಳದ ನೂತನ ಕಚೇರಿ ಉದ್ಘಾಟನೆ

ಹರಪನಹಳ್ಳಿ, ಆ.1- ತಾಲ್ಲೂಕಿನ ಅಡವಿಹಳ್ಳಿ ಕ್ರಾಸ್ ಬಳಿ ಅಗ್ನಿಶಾಮಕ ದಳದ ನೂತನ ಕಚೇರಿಯನ್ನು ಶಾಸಕ ಕರುಣಾಕರ ರೆಡ್ಡಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಉಪಾಧ್ಯಕ್ಷ ನಿಟ್ಟೂರು ಸಣ್ಣ ಹಾಲಪ್ಪ, ಜಿಲ್ಲಾ ಬಿಜೆಪಿ ಎಸ್ಟಿ ಘಟಕದ ಕಾರ್ಯದರ್ಶಿ ಆರ್. ಲೋಕೇಶ್, ತಾಲ್ಲೂಕು ಬಿಜೆಪಿ ಎಸ್ಟಿ ಘಟಕ ಅಧ್ಯಕ್ಷ ಟಿ. ಮನೋಜಾ, ತಾಲ್ಲೂಕ ಬಿಜೆಪಿ ಯುವ ಘಟಕದ ಅಧ್ಯಕ್ಷ ವಿನಯಕುಮಾರ್, ಕಾರ್ಯದರ್ಶಿ ಟಿ. ಶಿವಾನಂದ, ಪುರಸಭೆ ಸದಸ್ಯರಾದ ದ್ಯಾಮಜ್ಜಿ ರೊಕ್ಕಪ್ಪ, ಎಂ.ಕೆ. ಜಾವೀದ್, ಕಿರಣಕುಮಾರ್, ಮುಖಂಡರಾದ ಬಾಗಳಿ ಕೊಟ್ರೇಶಪ್ಪ, ಯಡಿಹಳ್ಳಿ ಶೇಖರಪ್ಪ, ಆರ್. ಕರೇಗೌಡ, ಚೌಡಪುರ ಷಣ್ಮುಖಪ್ಪ, ಕೆಂಗಳ್ಳಿ ಪ್ರಕಾಶ, ರಾಘವೇಂದ್ರಶೆಟ್ಟಿ, ತಿಮ್ಮಣ್ಣ, ಎಂ. ಸಂತೋಷ, ಯು.ಪಿ. ನಾಗರಾಜ ಉಪಸ್ಥಿತರಿದ್ದರು.

ಡಿವೈಎಸ್ಪಿ ಮಲ್ಲೇಶ ದೊಡ್ಮನಿ, ಸಿಪಿಐ ಕೆ.ಕುಮಾರ್‌, ವಲಯ ಅರಣ್ಯಾಧಿಕಾರಿ ಡಿ. ಭರತ್, ಪ್ರಾದೇಶಿಕ ಅಗ್ನಿಶಾಮಕ ದಳದ ಅಧಿಕಾರಿಗಳಾದ ಎಸ್. ರವಿ ಪ್ರಸಾದ್, ಜಯರಾಂ, ಹರಪನಹಳ್ಳಿ ಅಗ್ನಿಶಾಮಕ ದಳದ ಅಧಿಕಾರಿ ರಾಮಪ್ಪ, ಎಚ್.ಕೆ. ಹಡಗಲಿ ಅಗ್ನಿಶಾಮಕ ದಳದ ಅಧಿಕಾರಿ ರವಿಕುಮಾರ್, ಪಿಎಸ್ಐ. ಪ್ರಕಾಶ್, ಗೃಹರಕ್ಷಕ ದಳದ ತಾಲ್ಲೂಕು ಘಟಕಾಧಿಕಾರಿ ಮಲ್ಲಿಕಾರ್ಜುನಯ್ಯ ಇನ್ನಿತರರಿದ್ದರು.

Leave a Reply

Your email address will not be published.