ಕಂದಾಯ ಇಲಾಖಾ ಭೂಮಿ ಅತಿಕ್ರಮಣ ಹೊನಲು – ಬೆಳಕಿನ ಬಂದೋಬಸ್ತ್

ಕಂದಾಯ ಇಲಾಖಾ ಭೂಮಿ ಅತಿಕ್ರಮಣ ಹೊನಲು – ಬೆಳಕಿನ ಬಂದೋಬಸ್ತ್

ಹರಪನಹಳ್ಳಿ,ಆ.1- ತಾಲ್ಲೂಕಿನ ನಾರಾಯಣ ಪುರ ಗ್ರಾಮದ ಬಳಿ ಕಂದಾಯ ಇಲಾಖೆ ಜಮೀನು  ಅತಿಕ್ರಮಣ ಸಾಗುವಳಿಯಾಗಿದ್ದನ್ನು ತೆರವು ಗೊಳಿಸಿ ಗಿಡ ನೆಟ್ಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀ ಸರು ಹಗಲು ರಾತ್ರಿ ಬಂದೋಬಸ್ತ್ ಕೈಗೊಂಡಿದ್ದಾರೆ.

ಶುಕ್ರವಾರವೂ ತಹಶೀಲ್ದಾರ ಅನಿಲ್ ಕುಮಾರ ನೇತೃತ್ವದಲ್ಲಿ ಅರಣ್ಯ, ಕಂದಾಯ, ಪೊಲೀಸರು ಅಧಿ ಕಾರಿಗಳು ಆ ಜಾಗಕ್ಕೆ ಭೇಟಿ ನೀಡಿದಾಗ ಭೂಮಿ ಅತಿಕ್ರಮಣ ಮಾಡಿದ್ದ ಯಲ್ಲಾಪುರ ಕೊರಚರಹಟ್ಟಿ ರೈತರು ಮಕ್ಕಳೊಂದಿಗೆ ಪುನಃ ಬಂದು ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಮತ್ತೊಮ್ಮೆ ಎಚ್ಚರಿಕೆ ನೀಡಿ  ಮಕ್ಕಳ ಸಮೇತ ವಾಪಸ್ ಕಳಿಸಿದರು. ಶನಿ ವಾರ ಯಾವುದೇ ಅಡೆ ತಡೆ ಇಲ್ಲದೆ ಗಿಡಗಳನ್ನು ನೆಟ್ಟಿದ್ದಾರೆ. ರೈತರು ಪ್ರತಿಭಟನೆಗೆ ಮಕ್ಕಳನ್ನು ಕರೆದುಕೊಂಡು ಬಂದಿದ್ದರಿಂದ ಅಂಗ ನವಾಡಿ ಕಾರ್ಯಕರ್ತರನ್ನು ಆ ಪ್ರದೇ ಶದಲ್ಲಿ ನಿಯೋಜನೆ ಗೊಳಿಸಲಾಗಿತ್ತು.

ಈ ವೇಳೆ ವಲಯ ಅರಣ್ಯಾಧಿಕಾರಿ ಭರತ್ ಡಿ. ತಳವಾರ್  ಮಾತನಾಡಿ, ಸತತ 3 ದಿನಗಳಿಂದ 120 ಎಕರೆಯಲ್ಲಿ 22 ಸಾವಿರ  ಗಿಡಗಳನ್ನು ನೆಡಲಾಗಿದೆ. 3 ದಿನಗಳಿಂದ ಸಹ ರಾತ್ರಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಮುಂದಿನ 7 ದಿನಗಳ ಕಾಲ ರಾತ್ರಿ ಬಂದೋಬಸ್ತ್ ಮಾಡಲಾಗುತ್ತದೆ ಎಂದರು. 12 ಜೆಸಿಬಿ ಹಾಗೂ ಎರಡು ಇಟಾಚಿ 25 ಟ್ರ್ಯಾಕ್ಟರ್ ಗಳಿಂದ  ಒತ್ತುವರಿ ತೆರವುಗೊಳಿಸಿದ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ಟ್ರಂಚ್ ಹಾಕಲಾಯಿತು. ಕಳೆದ ಮೂರು ದಿನಗಳಿಂದ 100 ಜನ ಅರಣ್ಯ ಇಲಾಖೆ ಸಿಬ್ಬಂದಿ, 50 ಜನ ಪೊಲೀಸರು, 100 ಜನ ಕಾರ್ಮಿಕರು ಕೆಲಸ ಮಾಡಿದ್ದಾರೆ. ಈ 120 ಎಕರೆಯಲ್ಲಿ ಹಸಿರೀಕರಣ ಮಾಡಿ, ಅರಣ್ಯ ಇಲಾಖೆಯವರಿಗೆ ಒಪ್ಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ ಎಂದರು.

ವೃತ್ತ ನಿರೀಕ್ಷಕ ಕೆ. ಕುಮಾರ್, ದಾವಣಗೆರೆ ಎಸಿಎಫ್ ತಿಪ್ಪೇಸ್ವಾಮಿ, ಪಿಎಸ್ಐಗಳಾದ ಪ್ರಕಾಶ್, ಕಿರಣಕುಮಾರ್, ಇಸಾಕ್ ಅಹ್ಮದ್, ಲತಾ ತಾಳೇಕರ್, ಕಂದಾಯ ನಿರೀಕ್ಷಕ ಅರವಿಂದ, ಮಾಲತೇಶ, ಗ್ರಾಮ ಲೆಕ್ಕಿಗ ಜೀವನ್, ಹರಪನಹಳ್ಳಿ ಪೊಲೀಸ್ ಉಪವಿಭಾಗದ ವ್ಯಾಪ್ತಿಯ ಕೊಟ್ಟೂರು, ಹೂವಿನ ಹಡಗಲಿ  ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿತ್ತು.

Leave a Reply

Your email address will not be published.