ಅಡಿಕೆ ಬೆಳೆಯಲ್ಲಿ ಸಮಗ್ರ ನಿರ್ವಹಣೆ

ಅಡಿಕೆ ಬೆಳೆಯಲ್ಲಿ ಸಮಗ್ರ ನಿರ್ವಹಣೆ

ದಾವಣಗೆರೆ, ಆ.1- ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ತಾಲ್ಲೂಕಿನ ಅಗಸನಕಟ್ಟೆ ಗ್ರಾಮದಲ್ಲಿ ಅಡಿಕೆ ಬೆಳೆ ಸಮಗ್ರ ನಿರ್ವಹಣೆ ಕುರಿತು ವೈಜ್ಞಾನಿಕ ಕ್ಷೇತ್ರ ಭೇಟಿಯನ್ನು ಹಮ್ಮಿಕೊಳ್ಳಲಾಗಿತ್ತು.

ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಗ್ರಾಮದ ಆಯ್ದ ಅಡಿಕೆ ತೋಟಗಳಿಗೆ ಭೇಟಿ ನೀಡಿ ವೈಜ್ಞಾನಿಕ ಮಾಹಿತಿ ನೀಡಿದರು.  ಕೆಲವು ತೋಟಗಳಲ್ಲಿ ಸುಳಿ ತಿಗಣೆಯ ಬಾಧೆ ಕಂಡು ಬಂದಿದ್ದು, ಅದರ ನಿಯಂತ್ರಣಕ್ಕೆ ಕ್ಲೋರ್‌ಪೈರಿಫಾಸ್ 2 ಮಿಲೀ ಅಥವಾ ಡೈಮಿಥೋಯೆಟ್ 2 ಮಿಲೀ ಪ್ರತೀ ಲೀಟರ್ ನೀರಿನಲ್ಲಿ  ಬೆರೆಸಿ ಸಿಂಪಡಿಸಬೇಕು. ಹಾಗೆಯ ಅಣಬೆ ರೋಗ ನಿಯಂತ್ರಣಕ್ಕೆ ಈ ಸಮಯದಲ್ಲಿ ಅರ್ಕಾ ಸೂಕ್ಷ್ಮಾಣು ಜೀವಿಗಳ ಮಿಶ್ರಣವನ್ನು 10 ಮಿಲೀ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಪ್ರತಿ ಗಿಡದ ಬುಡಕ್ಕೆ 4 ಲೀಟರ್ ದ್ರಾವಣವನ್ನು ಹಾಕಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಆನಗೋಡು ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ರವಿ, ರೈತರಾದ ವಸಂತ ಕುಮಾರ್, ಚನ್ನಪ್ಪ, ಕೊಟ್ರಪ್ಪ, ಕಲ್ಲೇಶಪ್ಪ, ಚಂದ್ರಪ್ಪ ಇನ್ನಿತರರಿದ್ದರು.

Leave a Reply

Your email address will not be published.