86 ಪಾಸಿಟಿವ್, 85 ಬಿಡುಗಡೆ

ದಾವಣಗೆರೆ, ಜು. 30 – ಜಿಲ್ಲೆಯಲ್ಲಿ ಗುರುವಾರ 86 ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿದ್ದು, ಇದೇ ದಿನ 85 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 865ಕ್ಕೆ ಏರಿದೆ.

ಜಿಲ್ಲೆಯಲ್ಲಿ ಇದುವರೆಗೂ 1977 ಕೊರೊನಾ ಪ್ರಕರಣಗಳು ದಾಖಲಾಗಿದ್ದರೆ, 1066 ಜನರು ಗುಣವಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಗುಣವಾದವರ ಸಂಖ್ಯೆ ಗುರುವಾರದಂದು ಸಾವಿರ ದಾಟಿದಂತಾಗಿದೆ.

ಗುರುವಾರ ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಎನ್.ಆರ್. ಪೇಟೆಯ 50 ವರ್ಷದ ಪುರುಷ ಮೃತಪಟ್ಟಿದ್ದಾರೆ. ಕೊರೊನಾದಿಂದ ಜಿಲ್ಲೆಯಲ್ಲಿ ಇದುವರೆಗೂ 46 ಜನರು ಸಾವನ್ನಪ್ಪಿದ್ದಾರೆ.

ಗುರುವಾರ ಪತ್ತೆಯಾದ ಸೋಂಕಿತರಲ್ಲಿ ದಾವಣಗೆರೆ ತಾಲ್ಲೂಕಿನ  61 ಜನರಿದ್ದಾರೆ. ಹರಿಹರದ 8, ಜಗಳೂರಿನ ಇಬ್ಬರು, ಚನ್ನಗಿರಿಯ 12, ಹೊನ್ನಾಳಿಯ ಇಬ್ಬರು ಹಾಗೂ ಹೊರ ಜಿಲ್ಲೆಯ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.

ದಾವಣಗೆರೆ ತಾಲ್ಲೂಕಿನ 59 ಜನರು ಗುಣವಾಗಿ ಬಿಡುಗಡೆಯಾಗಿದ್ದಾರೆ. ಹರಿಹರ ತಾಲ್ಲೂಕಿನ 17, ಜಗಳೂರಿನ ಇಬ್ಬರು, ಚನ್ನಗಿರಿಯ ಒಬ್ಬರು, ಹೊನ್ನಾಳಿಯ ಮೂವರು ಹಾಗೂ ಹೊರ ಜಿಲ್ಲೆಯ ಮೂವರು ಗುಣವಾಗಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಯ ಅಧಿಕಾರಿಯಾದ 49ರ ಪುರುಷ,  ಸಿಐಡಿ ಕಚೇರಿಯ 45ರ ಪುರುಷ ಹಾಗೂ ಸಿ.ಜಿ. ಆಸ್ಪತ್ರೆಯ ಕ್ವಾರ್ಟರ್ಸ್‌ನ 27ರ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ.

ದಾವಣಗೆರೆ ಸರಸ್ವತಿ ನಗರದ 48ರ ಮಹಿಳೆ, ವಿಜಯ ಬ್ಯಾಂಕ್‌ನ 27ರ ಪುರುಷ, ನಿಜಲಿಂಗಪ್ಪ ಬಡಾವಣೆಯ 60ರ ಪುರುಷ, ಮಲ್ಲಿಕಾರ್ಜುನ ನಗರದ 44ರ ಮಹಿಳೆ, ಜಯನಗರ ಎ ಬ್ಲಾಕ್‌ನ 42ರ ಪುರುಷ, ಲೇಬರ್ ಕ್ವಾರ್ಟರ್ಸ್‌ನ 54ರ ಪುರುಷರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಆರ್.ಎಂ.ಸಿ. ಲಿಂಕ್ ರಸ್ತೆಯ ಟಿಸಿ ಲೇಔಟ್‌ 47ರ ಮಹಿಳೆ, ವಿದ್ಯಾನಗರದ ಕೆ.ಹೆಚ್. ರಂಗನಾಥ ಬಡಾವಣೆಯ 30ರ ಮಹಿಳೆ,  ವಸಂತ ರಸ್ತೆಯ 31ರ ಪುರುಷ, ಬಸವರಾಜ ಪೇಟೆಯ 25ರ ಮಹಿಳೆ, 59ರ ಪುರುಷ, ವಿನೋಬನಗರದ 70ರ ವೃದ್ಧೆ, 33ರ ಮಹಿಳೆ, 52 ಹಾಗೂ 60ರ ಪುರುಷರಲ್ಲಿ ಸೋಂಕಿರುವುದು ಕಂಡು ಬಂದಿದೆ.

ಕೆ.ಟಿ.ಜೆ. ನಗರದ 30ರ ಮಹಿಳೆ, ಕೆ.ಬಿ. ಬಡಾವಣೆಯ 59ರ ಪುರುಷ, ನಿಟುವಳ್ಳಿಯ 46ರ ಪುರುಷ, 27ರ ಮಹಿಳೆ, 26ರ ಪುರುಷ, ಎಸ್.ಎಸ್. ಬಡಾವಣೆಯ 47ರ ಪುರುಷ, ಕುಂಬಾರ ಪೇಟೆಯ 32ರ ಪುರುಷ, ಇಸ್ಲಾಮ್ ಪೇಟೆಯ 70ರ ಮಹಿಳೆ, ವಿದ್ಯಾನಗರದ 3 ವರ್ಷದ ಬಾಲಕಿ, 68ರ ಪುರುಷ, 33 ಹಾಗೂ 35ರ ಮಹಿಳೆಯರು ಹಾಗೂ 70ರ ವೃದ್ಧೆಯರಲ್ಲಿ ಸೋಂಕು ಪತ್ತೆಯಾಗಿದೆ.

ಸಿದ್ದರಾಮ ಬಡಾವಣೆಯ 56ರ ಪುರುಷ, ಯರಗುಂಟೆಯ 9ರ ಬಾಲಕಿ, ಜೈನ್ ಲೇಔಟ್‌ನ 65ರ ಮಹಿಳೆ, ಲೆನಿನ್ ನಗರದ 12ರ ಬಾಲಕ ಹಾಗೂ 38ರ ಮಹಿಳೆ, ಸ್ಟೇಡಿಯಂ ರಸ್ತೆಯ 45ರ ಪುರುಷ, ಗಾಂಧಿನಗರದ 13ರ ಬಾಲಕ, ಆಂಜನೇಯ ಬಡಾವಣೆಯ 50ರ ಪುರುಷ, ಬಾಷಾನಗರದ 30ರ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ.

ಎಲ್ಲಮ್ಮನಗರದ 14ರ ಬಾಲಕ, 5ರ ಬಾಲಕಿ, 16ರ ಯುವಕ, 35 ಹಾಗೂ 42ರ ಪುರುಷರು, 25 ಹಾಗೂ 38ರ ಮಹಿಳೆಯರಲ್ಲಿ ಸೋಂಕು ಕಂಡು ಬಂದಿದೆ.

ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರುವ 26 ಹಾಗೂ 41ರ ಪುರುಷರು, 59, 32, 47 ಹಾಗೂ 50ರ ಮಹಿಳೆಯರಲ್ಲಿ, ಶಿವಕುಮಾರ ಸ್ವಾಮಿ ಬಡಾವಣೆಯ 48ರ ಮಹಿಳೆ ಸಿದ್ದೇಶ್ವರ ಬಡಾವಣೆಯ 57ರ ಪುರುಷ, ತರಳಬಾಳು ಬಡಾವಣೆಯ 59ರ ಮಹಿಳೆ ಹಾಗೂ ಡಿಸಿಎಂ ಲೇಔಟ್‌ನ 40ರ ಪುರುಷರಲ್ಲಿ ಸೋಂಕಿರುವುದು ಪತ್ತೆಯಾಗಿದೆ.

ದಾವಣಗೆರೆ ತಾಲ್ಲೂಕು ಚಿಕ್ಕಬೂದಾಳ್‌ನ 76ರ ಪುರುಷ, ನೇರ್ಲಿಗೆಯ 9ರ ಬಾಲಕ, ಕೋಲ್ಕುಂಟೆಯ 33ರ ಪುರುಷನಲ್ಲಿ ಸೋಂಕಿರುವುದು ಕಂಡು ಬಂದಿದೆ.

ಚನ್ನಗಿರಿಯ ನೂರಾನಿ ಮಸೀದಿ ರಸ್ತೆಯ 26, 44 ಹಾಗೂ 33ರ ಪುರುಷರು, 30, 36, 38 ಹಾಗೂ 68ರ ಮಹಿಳೆಯರು, 7ರ ಬಾಲಕ, 2 ವರ್ಷದ ಬಾಲಕಿಯಲ್ಲಿ ಸೋಂಕು ಕಂಡು ಬಂದಿದೆ.

ಜಗಳೂರಿನ 45ರ ಪುರುಷ ಹಾಗೂ ಜಗಳೂರು ತಾಲ್ಲೂಕಿನ ಜಿದ್ದಿಕೆರೆಯ 60ರ ಪುರುಷರಲ್ಲಿ ಸೋಂಕು ಕಂಡು ಬಂದಿದೆ.

ಹೊನ್ನಾಳಿಯ ಹೊಸಕೆರೆಯ 50ರ ಪುರುಷ  ಹಾಗೂ ಹೊನ್ನಾಳಿ ತಾಲ್ಲೂಕಿನ ಗುಡ್ಡದ ಬೆನಕನಹಳ್ಳಿಯ 40ರ ಪುರುಷನಲ್ಲಿ ಸೋಂಕು ಕಂಡು ಬಂದಿದೆ.

ಹರಿಹರದ 65ರ ಪುರುಷ, 45ರ ಮಹಿಳೆ, 72ರ ಮಹಿಳೆ, ಬಾರಾ ಮಕಾನ್‌ನ 60ರ ಪುರುಷ, ನೀಲಕಂಠ ನಗರದ 51ರ ಮಹಿಳೆ ಹಾಗೂ 53ರ ಪುರುಷ ಮತ್ತು ಹರಿಹರ ತಾಲ್ಲೂಕಿನ ನಾಗೇನಹಳ್ಳಿಯ 6ರ ಮಹಿಳೆ, ಗುತ್ತೂರಿನ 40ರ ಪುರುಷರಲ್ಲಿ ಸೋಂಕು ಕಂಡು ಬಂದಿದೆ.

ಹರಪನಹಳ್ಳಿ ಬ್ಯಾಡರಗೆರೆಯ 45ರ ಪುರುಷನಿಗೆ ಸೋಂಕು ಬಂದಿದೆ.

ಬಿಡುಗಡೆಯಾದವರು : ಎನ್.ಆರ್. ರಸ್ತೆಯ ಜೈನ್ ಟೆಂಬಲ್ ಬಳಿಯ 54ರ ಮಹಿಳೆ, ಜೆ.ಹೆಚ್. ಪಟೇಲ್ ನಗರದ 55ರ ಮಹಿಳೆ,  31ರ ಪುರುಷ, ಚಿಗಟೇರಿ ಗಲ್ಲಿಯ 29ರ ಪುರುಷ,  ಜಯನಗರದ 42ರ ಪುರುಷ, ಪ್ರಶಾಂತ್ ನಗರ ಹರಿಹರದ 65ರ ಪುರುಷ,  ಚಿಕ್ಕಬಳ್ಳಾಪುರದ ಗುಡಿಬಂಡೆ ಸಿಟಿಯ 2 ವರ್ಷದ ಹೆಣ್ಣು ಮಗು, ಹಾಗೂ 25ರ ಮಹಿಳೆ, ದಾವಣಗೆರೆ ಶಿವನಗರದ 8ರ ಬಾಲಕಿ, ದೇವರಾಜ ಅರಸು ಬಡಾವಣೆಯ 43ರ ಮಹಿಳೆ, ಬೆಳ್ಳೂಡಿ ಗಲ್ಲಿಯ  39ರ ಪುರುಷ, ಜಾಲಿನಗರದ 4ನೇ ಮೇನ್, 2ನೇ ಕ್ರಾಸ್‌ನ 64ರ ಪುರುಷ, ಶಿವನಗರದ 38ರ ಪುರುಷ, ಶಂಕರ್ ವಿಹಾರ ಬಡಾವಣೆಯ 40ರ ಪುರುಷ, ದೇವರಾಜ ಅರಸು ಬಡಾವಣೆಯ 1ನೇ ಮೇನ್, 2ನೇ ಕ್ರಾಸ್‌ 62ರ ಪುರುಷ,  ಬಂಬೂ ಬಜಾರ್ ಕಲ್ಲೇಶ್ವರ ರೈಸ್‌ ಮಿಲ್ ಮುಂಭಾಗದ ವಾಸಿ 28ರ ಪುರುಷ, ಚಿಗಟೇರಿ ಜಿಲ್ಲಾಸ್ಪತ್ರೆಯ ಸಿಬ್ಬಂದಿ 40ರ ಮಹಿಳೆ, ಜಾಲಿನಗರದ 1ನೇ ಮೇನ್, 5ನೇ ಕ್ರಾಸ್‌ನ 51ರ ಪುರುಷ, ನ್ಯೂ ಬಂಬೂ ಬಜಾರ್‌ನ 44ರ ಪುರುಷ, ಎಂ.ಸಿಸಿ. ಎ ಬ್ಲಾಕ್‌ನ 4ನೇ ಮೇನ್‌ ನ  57ರ ಮಹಿಳೆ, ಕೆ.ಬಿ. ಬಡಾವಣೆ 2ನೇ ಕ್ರಾಸ್‌, ದೀಕ್ಷಿತ್ ರಸ್ತೆಯ 26ರ ಮಹಿಳೆ, ಸಿದ್ದವೀರಪ್ಪ ಬಡಾವಣೆಯ 30ರ ಮಹಿಳೆ, ಎಂ.ಸಿ.ಸಿ. ಎ ಬ್ಲಾಕ್‌ 4ನೇ ಮುಖ್ಯರಸ್ತೆಯ 60ರ ಪುರುಷ.

ದಾವಣಗೆರೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ 34ರ ಪುರುಷ, ನರಸರಾಜ ಪೇಟೆಯ 39ರ ಪುರುಷ, ದೇವರಾಜ ಅರಸು ಬಡಾವಣೆ ಸಿ ಬ್ಲಾಕ್ 1ನೇ ಮೇನ್, 1ನೇ ಕ್ರಾಸ್‌ನ 23ರ ಪುರುಷ,  ಕೊಟ್ರೇಶ್ವರ ಬಡಾವಣೆ ನಿಟುವಳ್ಳಿಯ 19ರ ಯುವತಿ, ನಿಜಲಿಂಗಪ್ಪ ಬಡಾವಣೆ 1ನೇ ಮೇನ್, 1ನೇ ಕ್ರಾಸ್‌ನ 37ರ ಮಹಿಳೆ,  ಎಸ್.ಪಿ. ಕಚೇರಿಯ ಎಸ್ಪಿ ಗನ್ ಮ್ಯಾನ್  31 ವರ್ಷದ ಪುರುಷ,  ವಿನೋಬನಗರದ 3ನೇ ಮೇನ್, 9ನೇ ಕ್ರಾಸ್‌  37 ಪುರುಷ,  ಸಿದ್ದಗಂಗಾ ನಗರದ 42ರ ಪುರುಷ, ಎಸ್.ಎಸ್.ಐ.ಎಂ.ಸಿ. ಆಸ್ಪತ್ರೆಯ 26ರ ಪುರುಷ, ಕೆಟಿಜೆ ನಗರ 18ನೇ ಕ್ರಾಸ್‌ನ 25ರ ಮಹಿಳೆ,  ಅಹ್ಮದ್ ನಗರದ 1ನೇ ಮೇನ್, 4ನೇ ಕ್ರಾಸ್‌ನ 37ರ ಪುರುಷ, 68ರ ವೃದ್ಧೆ, ದೇವರಾಜ ಅರಸು ಬಡಾವಣೆ 2ನೇ ಮೇನ್, 2ನೇ ಕ್ರಾಸ್‌ನ 30ರ ಪುರುಷ, ನಿಟುವಳ್ಳಿಯ 44ರ ಪುರುಷ.

ದಾವಣಗೆರೆ ವಿದ್ಯಾನಗರ 3ನೇ ಮೇನ್, 2ನೇ ಕ್ರಾಸ್‌ನ 39ರ ಪುರುಷ,  ಡಿಸಿಎಂ ಲೇ ಔಟ್‌ನ  35ರ ಮಹಿಳೆ, ದಾವಣಗೆರೆ ಚೌಕಿಪೇಟೆ ಮುಖ್ಯ ರಸ್ತೆ 27ರ ಯುವತಿ, ಅಶೋಕ ನಗರದ 27ರ ಯುವತಿ, ಐಜಿಪಿ ಕಚೇರಿ ಪೊಲೀಸ್ ಕಾನ್ಸ್‌ಟೇಬಲ್ 28ರ ಪುರುಷ, ಆಜಾದ್ ನಗರದ 1ನೇ ಮೇನ್, 13ನೇ ಕ್ರಾಸ್‌ನ  30ರ ಪುರುಷ, ದಾವಣಗೆರೆ ಚೌಕಿಪೇಟೆಯ 1ನೇ ಕ್ರಾಸ್‌ನ 54ರ ಮಹಿಳೆ, ಆಜಾದ್ ನಗರದ 1ನೇ ಮೇನ್, 13ನೇ ಕ್ರಾಸ್‌ 22ರ ಯುವತಿ, ಕೆ.ಬಿ. ಬಡಾವಣೆ ಕಾವೇರಮ್ಮ ಶಾಲೆ ಹಿಂಭಾಗದ 20ರ ಯುವತಿ, ವಸಂತ ರಸ್ತೆಯ 65ರ ಪುರುಷ, ಬಂಬೂ ಬಜಾರ್‌ನ 21ರ ಯುವಕ, 46ರ ಪುರುಷ, 21ರ ಪುರುಷ, 19ರ ಯುವಕ, 42ರ ಪುರುಷ,  ಕುವೆಂಪು ನಗರದ 23ರ  ಪುರುಷ, 19ರ ಯುವಕ.

ಚನ್ನಗಿರಿ ಬಸವಾಪಟ್ಟಣದ ಅಹ್ಮದ್ ಬುಡೇನ್ ನಗರದ 35ರ ಮಹಿಳೆ, ಚನ್ನಗಿರಿ  ತಾ.ನಲ್ಲೂರಿನ 32ರ ಪುರುಷ, ಜಗಳೂರು ಬಿಳಿಚೋಡು ಎ.ಕೆ ಕಾಲೋನಿಯ 14ರ ಬಾಲಕಿ, ಹೊನ್ನಾಳಿಯ ದುರ್ಗಿಗುಡಿ 8ನೇ ಕ್ರಾಸ್‌ನ 54ರ ಮಹಿಳೆ, 48ರ ಮಹಿಳೆ, 28ರ ಪುರುಷ.  ಹಾವೇರಿ ಜಿಲ್ಲೆ ರಾಣೇಬೆನ್ನೂರಿನ 21ರ ಮಹಿಳೆ.

ಹರಿಹರ ಹರ್ಲಾಪುರದ 55ರ ಪುರುಷ,  ವಿಜಯಬ್ಯಾಂಕ್ ಎದುರು ನಿವಾಸಿ 37ರ ಪುರುಷ,  ಜೆ.ಸಿ. ಬಡಾವಣೆಯ 42ರ ಪುರುಷ, ವಿಜಯ ಬ್ಯಾಕ್ ಎದುರಿನ 72ರ ವೃದ್ಧ, ಹರ್ಲಾಪುರದ 39ರ ಪುರುಷ,  ವಿದ್ಯಾನಗರ ಸಿ ಬ್ಲಾಕ್‌ನ 40ರ ಪುರುಷ,  ನಡುವಲ ಪೇಟೆಯ 23ರ ಯುವತಿ, ಇಂದಿರಾನಗರದ 60ರ ಮಹಿಳೆ, 17ರ ಪುರುಷ, 44ರ ಮಹಿಳೆ. 46ರ ಮಹಿಳೆ,  ಹರಿಹರ ಹನಗವಾಡಿಯ 13ರ ಬಾಲಕ, ಹರಿಹರ ಮಲೇಬೆನ್ನೂರು ಇಂದಿರಾ ನಗರದ 24ರ ಪುರುಷ, 23ರ ಪುರುಷ, ಹರಿಹರ ವಿದ್ಯಾನಗರದ 32ರ ಪುರುಷ, ಗಣೇಶ್ ಕಾಟ್ವೆ ಮೋಚಿ ಕಾಲೋನಿಯ 18ರ ಯುವಕ ಇವರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Leave a Reply

Your email address will not be published.