ಬಸವಣ್ಣನ ಆದರ್ಶಗಳನ್ನು ಯುವ ರಾಜಕಾರಣಿಗಳು ಅಳವಡಿಸಿಕೊಳ್ಳಲಿ

ಬಸವಣ್ಣನ ಆದರ್ಶಗಳನ್ನು ಯುವ ರಾಜಕಾರಣಿಗಳು ಅಳವಡಿಸಿಕೊಳ್ಳಲಿ

ಶ್ರೀ ಬಸವ ಪ್ರಭು ಸ್ವಾಮೀಜಿ ಕರೆ

ದಾವಣಗೆರೆ, ಜು. 30-   ಕಾಯಕವೇ ಕೈಲಾಸ, ಅರಿವೇ ಗುರು ಎಂಬ ಬಸವಣ್ಣನವರ ಸಂದೇಶಗಳನ್ನು ಯುವ ರಾಜಕಾರಣಿಗಳು ಅಳವಡಿಸಿಕೊಂಡರೆ ಯಶಸ್ಸು ಕಾಣುತ್ತಾರೆ ಎಂದು ವಿರಕ್ತ ಮಠದ ಶ್ರೀ ಬಸವಪ್ರಭ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಮ್ಮ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡ ಸಂದರ್ಭದಲ್ಲಿ   ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಮತ್ತು ಬಾಡದ ಆನಂದರಾಜ್ ಗೆಳೆಯರ ಬಳಗ ಶುಭ ಕೋರಿದ ಸಂದರ್ಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಈ ನಾಡಿನಲ್ಲಿ ಶೋಷಿತರ, ಬಡವರ ನೊಂದವರ ಸೇವೆ ಮಾಡಿದವರೇ ಇತಿಹಾಸ ಪುರುಷರಾಗಿದ್ದಾರೆ. ವಿಶ್ವ ಗುರು ಬಸವಣ್ಣನವರು ಕ್ರಾಂತಿ ಪುರು ಷರಾಗಿದ್ದು, ಸಮ ಸಮಾಜದ ಚಿಂತನೆ ಯಿಂದ. ಅದೇ ರೀತಿ ನಾಡಿಗೆ ಅಣ್ಣಾವ್ರು ಎನಿಸಿಕೊಂಡು ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಡಾ. ರಾಜಕುಮಾರ್ ರವರ ಅಭಿನಯಗಳು ಬಡವರ, ಕಾರ್ಮಿಕರ ನೊಂದವರ ಪರ ದ್ವನಿಯೆತ್ತಿದ್ದಕ್ಕೆ ಇತಿಹಾಸ ಪುರುಷರಾದರು. ಅದೇ ರೀತಿ ದೇವರಾಜ ಅರಸು, ಎಸ್. ಬಂಗಾರಪ್ಪ, ಸಿದ್ದರಾಮಯ್ಯ, ಮುಖ್ಯಮಂತ್ರಿ ಯಡಿ ಯೂರಪ್ಪ ಅವರು ಕೂಡ ನೊಂದವರ ಧ್ವನಿಯಾಗಿದ್ದಾರೆ. ಇವರೆಲ್ಲರೂ ಬಸವಣ್ಣನವರ ಆದರ್ಶಗಳ ಅನುಯಾಯಿಗಳಾಗಿದ್ದಾರೆ ಎಂದು ಹೇಳಿದ ಶ್ರೀಗಳು, ಲಾಕ್ ಡೌನ್ ನಲ್ಲಿ ಹಸಿದವರಿಗೆ ಅನ್ನ ನೀಡಿದ ಲೋಕಿಕೆರೆ ನಾಗರಾಜ್ ಅವರ ಸೇವೆಯನ್ನು ಕೊಂಡಾಡಿದರು.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಮುಖಂಡ ಬಾಡದ ಆನಂದರಾಜ್. ರಾಜು ಮಠದ್ ಸಂಗಣ್ಣ ಇನ್ನೂ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published.