ಪಂಚಮಸಾಲಿ ಸಮಾಜದಿಂದ ಕೋವಿಡ್ ಅರಿವು ಕಾರ್ಯಕ್ರಮ

ಪಂಚಮಸಾಲಿ ಸಮಾಜದಿಂದ ಕೋವಿಡ್ ಅರಿವು ಕಾರ್ಯಕ್ರಮ

ದಾವಣಗೆರೆ, ಜು.31- ದಾವಣಗೆರೆ ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ  ಸಮಾಜದ ವಿವಿಧ ಅಂಗ ಸಂಸ್ಥೆಗಳ ಪದಾಧಿಕಾರಿಗಳಿಗೆ ಕೋವಿಡ್-19 ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ವನ್ನು ನಗರದ ಸದ್ಯೋಜಾತ ಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಪಂಚಮಸಾಲಿ ಸಮಾಜ ಹಾಗೂ ಹರ ಸೇವಾ ಸಂಸ್ಥೆ ಅಧ್ಯಕ್ಷ ಬಿ.ಸಿ. ಉಮಾಪತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಹಾಗೂ ಮಾಜಿ ಉಪಮೇಯರ್ ಬಿ. ಲೋಕೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಎಸ್.ಕೆ. ಶ್ರೀಧರ್, ಅಂದನೂರು ಕೊಟ್ರಬಸಪ್ಪ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕೋವಿಡ್-19 ಆಹಾರ ಕಿಟ್‌ಗಳ ದಾನಿಗಳು, ಜಿಲ್ಲಾ ಉಪಾಧ್ಯಕ್ಷ ಬಾದಾಮಿ ಕರಿಬಸಪ್ಪ, ಎಂ. ದೊಡ್ಡಪ್ಪ, ವಾಣಿ ಶಿವಣ್ಣ, ಅಂದನೂರು ಮುರುಗೇಶ್, ಜಿಲ್ಲಾ ನೌಕರ ಘಟಕದ ಅಧ್ಯಕ್ಷ ಮಲ್ಲಿನಾಥ, ನಗರ ಘಟಕಾಧ್ಯಕ್ಷ ಕೈದಾಳ್ ಶಿವಶಂಕರ್, ನಗರ ಯುವ ಘಟಕದ ಅಧ್ಯಕ್ಷ ಬಾದಾಮಿ ಜಯಣ್ಣ, ತಾಲ್ಲೂಕು ಘಟಕದ ಅಧ್ಯಕ್ಷ ಬಿಸಲೇರಿ ಜಯಣ್ಣ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ರಶ್ಮಿ ಕುಂಕೋವ್, ಯುವ ಘಟಕದ ರಾಜ್ಯಾಧ್ಯಕ್ಷ ನವೀನ್ ಪಾಟೀಲ್, ಉಪಾಧ್ಯಕ್ಷ ಸತೀಶ್ ಮತ್ತೋಡ್ ಮತ್ತು ಎಲ್ಲಾ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published.