ಖರೀದಿ ವೇಳೆ ಮೊಬೈಲ್ ಅಪಹರಣಕ್ಕೆ ಯತ್ನ : ಧರ್ಮದೇಟು

ದಾವಣಗೆರೆ, ಜು.30- ಹಬ್ಬದ ಖರೀದಿಯಲ್ಲಿ ತಲೀನರಾಗಿದ್ದನ್ನು ಬಂಡವಾಳವಾಗಿಸಿಕೊಂಡ ಯುವಕನೋರ್ವ ಮೊಬೈಲ್ ಅಪಹರಿಸಲು ಯತ್ನಿಸಿ ಸಾರ್ವಜನಿಕರ ಕೈಗೆ ಸಿಕ್ಕು ಧರ್ಮದೇಟು ತಿಂದಿರುವ ಘಟನೆ ನಗರದಲ್ಲಿ ಇಂದು ನಡೆದಿದೆ. ಪಿ.ಬಿ. ರಸ್ತೆ ಬಳಿ ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಸುರೇಶ್ ಎಂಬುವರು ಹೂವು ಖರೀದಿಯಲ್ಲಿ ತಲೀನರಾಗಿದ್ದರು. 

ಈ ವೇಳೆ ವಿಶಾಖ ಎಂಬಾತ ಅವರ ಮೊಬೈಲನ್ನು ಗೊತ್ತಾಗದಂತೆ ಅಪಹರಿಸಿ, ಪರಾರಿಯಾಗಲು ಯತ್ನಿಸಿದ್ದು, ಇದನ್ನು ಕಂಡ ಪಕ್ಕದಲ್ಲಿದ್ದ ಸಾರ್ವಜನಿಕರೋರ್ವರು ಸುರೇಶ್‌ಗೆ ಕೂಗಿ ಹೇಳಿದ್ದಾರೆ. ತಕ್ಷಣವೇ ಓಡಲು ಯತ್ನಿಸಿದ ಯುವಕನನ್ನು ಹಿಡಿದ ಸಾರ್ವಜನಿಕರು ಆತನಿಗೆ ಥಳಿಸಿ ಬಡಾವಣೆ ಪೊಲೀಸ್ ಠಾಣೆಗೆ ಒ‍ಪ್ಪಿಸಿದ್ದಾರೆ.

Leave a Reply

Your email address will not be published.