ಅಶೋಕ ರಸ್ತೆ ರೈಲ್ವೇ ಗೇಟ್‌ ಸಮಸ್ಯೆಗೆ ಹೀಗೊಂದು ಪರಿಹಾರ

ಅಶೋಕ ರಸ್ತೆ ರೈಲ್ವೇ ಗೇಟ್‌ ಸಮಸ್ಯೆಗೆ ಹೀಗೊಂದು ಪರಿಹಾರ

ದಾವಣಗೆರೆ, ಜು. 30- ಹಲವು ವರ್ಷಗಳಿಂದ ನಗರದ ಜನತೆಗೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವ ಅಶೋಕ ರಸ್ತೆ ರೈಲ್ವೇ ಕ್ರಾಸಿಂಗ್ ಸಮಸ್ಯೆಗೆ ನಗರದ ಕುಂಬಳೂರು ಸುಬ್ಬರಾವ್ ಪರಿಹಾರವೊಂದನ್ನು ಸೂಚಿಸಿದ್ದಾರೆ.

ಪ್ರಸ್ತುತ ಇರುವ ಪಿ.ಬಿ. ರಸ್ತೆ 120 ಅಡಿಗಳಷ್ಟಿದೆ. ಈ ರಸ್ತೆಯ ಮಧ್ಯಭಾಗದ ಸುಮಾರು 20 ಅಡಿ ರಸ್ತೆ ಬಳಸಿಕೊಂಡು ಗಾಂಧಿ ವೃತ್ತದಿಂದ ಬೆಂಗಳೂರು ಮಾರ್ಗದ ಕಡೆ 300 ಹಾಗೂ ಹರಿಹರ ಕಡೆ  ಮಾರ್ಗವಾಗಿ 300 ಅಡಿ ದೂರದಿಂದ ಫ್ಲೈ ಓವರ್ ನಿರ್ಮಿಸಬಹುದು ಎಂದು ಅಭಿಪ್ರಾಯಿಸಿದ್ದಾರೆ.

ಗಾಂಧಿ ವೃತ್ತದಲ್ಲಿ ಫ್ಲೈ ಓವರ್ ವೃತ್ತ ನಿರ್ಮಿಸಿ ಬೆಂಗಳೂರು ಹಾಗೂ ಹರಿಹರ ಮಾರ್ಗವಾಗಿ  ಬರುವ ವಾಹನಗಳು ರೈಲ್ವೇ ಹಳಿಯಾಚೆ ಹೋಗಲು ಬಯಸಿದರೆ ಫ್ಲೈ ಓವರ್ ಬಳಸಿ ಸಾಗಬಹುದಾಗಿದೆ.  ಹಳಿಯಿಂದಾಚೆ ಸುಮಾರು 120 ಅಡಿ ದೂರದಲ್ಲಿರುವ ಮಂಡಿಪೇಟೆಯ ಎಸ್‌ಬಿಐ ಎಟಿಎಂ ಬಳಿ ಫ್ಲೈ ಓವರ್ ಇಳಿಸಿ, ವಾಹನಗಳು ಮಂಡಿಪೇಟೆಯತ್ತ ತೆರಳಲು ಸಹಕಾರಿಯಾಗುತ್ತದೆ.

ಇನ್ನೊಂದು ರಸ್ತೆಯನ್ನು ಅಶೋಕ ಟಾಕೀಸ್ ಬಲಭಾಗಕ್ಕೆ ಕೊಂಡೊಯ್ದು ಶಾಂತಿ ಟಾಕೀಸ್ ರಸ್ತೆಗೆ ಇಳಿಸಿದಲ್ಲಿ ವಾಹನಗಳು ಶಾಂತಿ ಟಾಕೀಸ್ ರಸ್ತೆ ಮೂಲಕ ಸಾಗುತ್ತವೆ. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಸುಬ್ಬರಾವ್  ಹೇಳಿದ್ದಾರೆ.

ಒಟ್ಟಿನಲ್ಲಿ ಅಟ್ಟ ಹತ್ತಿ ಅಶೋಕ ಟಾಕೀಸ್ ಕಡೆ ಇಳಿದಂತೆ ಇರುವ ಈ ಯೋಜನೆಯಿಂದ ಯಾವುದೇ ರಸ್ತೆ ಅಗಲೀಕರಣದ ಅಗತ್ಯವೂ ಇರುವು ದಿಲ್ಲ. ಯಾವ ವ್ಯಾಪಾರಸ್ಥರಿಗೂ ತೊಂದರೆ ಯಾಗುವುದಿಲ್ಲ. ಕಡಿಮೆ ವೆಚ್ಚದಲ್ಲಿ ಈ ರೀತಿ ಪರಿಹಾರದಿಂದ ಹಲವು ವರ್ಷದ ಸಮಸ್ಯೆ ಪರಿಹರಿಸ ಬಹುದು. ಈ ನಿಟ್ಟಿನಲ್ಲಿ ಜನಪ್ರತಿ ನಿಧಿಗಳು, ಜಿಲ್ಲಾಡಳಿತ ಕಾರ್ಯೋನ್ಮುಖ ರಾಗಬಹುದಾಗಿದೆ
ಎಂದು ಅವರು ಹೇಳಿದ್ದಾರೆ.

Leave a Reply

Your email address will not be published.