ಸಂಕಲ್ಪವಿರಲಯ್ಯಾ

ಸಂಕಲ್ಪವಿರಲಯ್ಯಾ

ಪರಿಶ್ರಮದಿ ದುಡಿದು ತಿನ್ನುವ ಸಂಕಲ್ಪವಿರಲಯ್ಯಾ
ಪರಸ್ತ್ರೀಗೆ ಹಂಬಲಿಸದ ಸಂಕಲ್ಪವಿರಲಯ್ಯಾ
ಪರಧನವ ಒಲ್ಲೆನೆಂಬ ಸಂಕಲ್ಪವಿರಲಯ್ಯಾ
ಅಪಕಾರಿಯಾಗದೆ
ಉಪಕಾರಿಯಾಗುವ ಸಂಕಲ್ಪವಿರಲಯ್ಯಾ
ಹಿರಿಯರನು ಗೌರವಿಸುವ ಸಂಕಲ್ಪವಿರಲಯ್ಯಾ
ಕಿರಿಯರನು ಪ್ರೀತಿಸುವ ಸಂಕಲ್ಪವಿರಲಯ್ಯಾ
ಅಂತರ್ಮುಖಿಯಾಗದೆ
ಸಮಾಜಮುಖಿಯಾಗುವ ಸಂಕಲ್ಪವಿರಲಯ್ಯಾ
ಪ್ರತಿಜೀವಿಯಲಿ ಪರಮಾತ್ಮನ
ಕಾಣುವ ಸಂಕಲ್ಪವಿರಲಯ್ಯಾ ಕಾಶಿ ವಿಶ್ವನಾಥ.


ಸಂತೋಷ್ ಕುಮಾರ್ (ಸಂಕೆ)

Leave a Reply

Your email address will not be published.