ಶಿವಧ್ಯಾನ ಮಂದಿರದ ವೈಶಿಷ್ಟ್ಯತೆ

ಶಿವಧ್ಯಾನ ಮಂದಿರದ ವೈಶಿಷ್ಟ್ಯತೆ

ಈ ಧ್ಯಾನ ಮಂದಿರದಿ ಪ್ರತಿಷ್ಠಾಪಿತ ಮೂರ್ತಿಗಳಿವೆ
ಎಳನೀರು ಹಾಲುತುಪ್ಪಗಳ ಅಭಿಷೇಕವಿಲ್ಲ
ಗಂಧ, ಹರಿದ್ರ-ಕುಂಕುಮಗಳ ಅಲಂಕಾರವಿಲ್ಲ
ವಿವಿಧ ಹೂ, ಪತ್ರೆಗಳ ಪಾತ್ರವಿಲ್ಲ
ಗಂಟೆ, ಜಾಗಟೆಗಳ ಸದ್ದುಗದ್ದಲವಿಲ್ಲ
ಮಂತ್ರ ಘೋಷಗಳ ತಂತ್ರವಿಲ್ಲ
ಕರ್ಪೂರ ಊದುಬತ್ತಿಗಳ ಹೊಗೆ ಇಲ್ಲ
ಪೂಜೆ, ಪುನಸ್ಕಾರಗಳೆಂಬ ಪುರೋಹಿತ ಪೂಜಾರಿಗಳ
ಪೂತ್ಕಾರವಿಲ್ಲ, ನೈವೇದ್ಯಗಳ ಜಂಜಾಟವಿಲ್ಲ
ಹರಕೆ, ಕಾಣಿಕೆಗಳ ಒತ್ತಾಯವಿಲ್ಲ
ಕಂದಾಚಾರಗಳ ಗೊಂದಲವಿಲ್ಲಿಲ್ಲವೇ ಇಲ್ಲ
ಭಯವಲಿಲ್ಲದ ಭಕ್ತಿಗಷ್ಟೇ ಮಹತ್ವವಿಲ್ಲಿ
ನಿಶ್ಯಬ್ಧ, ಪ್ರಶಾಂತತೆಯೇ ಮೈವೆತ್ತಿದೆ ಇಲ್ಲಿ
ಮೂರ್ತಿಗಳ ಮುಂದೆ ಹಚ್ಚಿಟ್ಟ
ಹರಳೆಣ್ಣೆ ದೀಪದ ಆರತಿ
ತೆಗೆದುಕ ಕೊಳ್ಳುವುದಷ್ಟೇ ಬಂದ ಭಕ್ತರ ಆಚಾರ
ಏನನ್ನೂ ಬಯಸದ ನಿರ್ಲಿಪ್ತ
ಮನಸಿನ ಪ್ರಶಾಂತ ಧ್ಯಾನ
ಸ್ಥಿತಿಗಷ್ಟೇ ಇಲ್ಲಿ ಮಹತ್ವ… ಸದಾ
ಓಂ ನಮಃ ಶಿವಾಯ ಮಂತ್ರದ ಮುದ್ರಿತ ಉಲಿತವಿಲ್ಲಿದೆ
ಇದೇ ನಮ್ಮ ವಿವೇಕಾನಂದ ಬಡಾವಣೆಯ
ಪ್ರತಿಷ್ಠಾಪಿತ ಗಣಪ, ಶಿವ, ಸರಸ್ವತಿ
ಮೂರ್ತಿಗಳ ಶಿವಧ್ಯಾನ ಮಂದಿರದ ಶ್ರೇಷ್ಠತೆ
ವಿಶೇಷತೆ, ಸರಳತೆ, ಸೌಮ್ಯತೆ
ಮಂದಿರದ ಸುತ್ತಣ ವಿಶಾಲ ಆವರಣದಿ
ಕಂಗೋಳಿಪ ವರ್ಣಮಯ ಹೂ ದೋಟ
ಹಬ್ಬಿಹರಡಿರುವ ಹರಿದ್ವರಣ ಬಳ್ಳಿಗಳು
ಹಸಿರು ಹುಲ್ಲಿನ ಹಾಸಿಗೆ ನೆಲದಿ ಮನಕೆ ಮುದ ನೀಡುವ
ಧ್ಯಾನಾಸಕ್ತಕರ ಸುಂದರ ತಾಣವಿದು.


ಬಿ.ಎಲ್. ಸೀತಾರಾಮಾಚಾರ್
ನಿವೃತ್ತ ಉಪನ್ಯಾಸಕರು
ತ್ಯಾವಣಿಗೆ.

Leave a Reply

Your email address will not be published.