ರಕ್ಷಕರು ರಕ್ಷಕರು ಆರಕ್ಷಕರು

ರಕ್ಷಕರು ರಕ್ಷಕರು ಆರಕ್ಷಕರು

ಜೀವದ ಹಂಗುತೊರೆದು ಹೋರಾಡುವವರು
ಆಪ್ತ ಮಿತ್ರರೆಂದರೆ ಅವರೇ
ಆಪ್ತರಕ್ಷಕರೂ ಅವರೇ.

ರಾತ್ರಿ-ಹಗಲೆನ್ನದೆ ದುಡಿತ
ಸಂಸಾರ ಸುಖವೇ ಹೊಡೆತ
ಇವರು ಕಾರ್ಯ ನಿರ್ವಹಿಸುತ್ತಿದ್ದರೆ
ನಮಗಿಲ್ಲ ಯಾವ ತೊಂದರೆ.

ನಮ್ಮನ್ನೆಲ್ಲಾ ಮನೆಯಲ್ಲೇ ಕ್ಷೇಮವಾಗಿರುವಂತೆ
ಕಾಯುತ್ತಾರೆ  ತಾವು ಮಳೆ ಬಿಸಿಲಿನಲ್ಲಿ ನಿಂತೆ
ಕಳ್ಳತನವಾಗಲಿ ಟ್ರಾಫಿಕ್ ಆಗಲಿ ಇವರೇ ಬೇಕು
ಅವರಿಲ್ಲದೆ ನಾವು ಜೀವನ ಹೇಗೆ ಕಳೆಯಬೇಕು.

ನಮ್ಮ ಪೊಲೀಸ್ ಸಿಬ್ಬಂದಿಗೆ ನಾವು ಜೈ ಎನ್ನಬೇಕು
ಕಷ್ಟದ ಸಮಯದಲ್ಲಿ ಇವರು ನಿಲ್ಲಬೇಕು
ಎಲ್ಲ ಜನರನ್ನು ಇವರೇ ಕಾಪಾಡಬೇಕು
ಇವರಿಗೆ ಯಾವತ್ತೂ ನಾವು ಕೈ ಮುಗಿಯಬೇಕು.


ಕೋಮಲ ವಸಂತ್ ಕುಮಾರ್
ದಾವಣಗೆರೆ.

Leave a Reply

Your email address will not be published.