ಪಿಂಚಣಿ ವಂಚಿತ ನೌಕರರಿಂದ ಸ್ಟ್ರೈಕ್ ಫ್ರಮ್ ಹೋಮ್

ಪಿಂಚಣಿ ವಂಚಿತ ನೌಕರರಿಂದ ಸ್ಟ್ರೈಕ್ ಫ್ರಮ್ ಹೋಮ್

ದಾವಣಗೆರೆ, ಜು.29- ಪಿಂಚಣಿ ಸೌಲಭ್ಯಕ್ಕೆ ಒಳಪಡಿಸುವಂತೆ ಒತ್ತಾಯಿಸಿ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರು ಸ್ಟ್ರೈಕ್ ಫ್ರಮ್ ಹೋಮ್ ಎಂಬ ವಿನೂತನ ಪ್ರತಿಭಟನೆ ಮುಖಾಂತರ ಸರ್ಕಾರದ ಗಮನ ಸೆಳೆದಿದ್ದಾರೆ.

ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ನೇತೃತ್ವದಲ್ಲಿ ರಾಜ್ಯಾದ್ಯಂತ ಇದೇ ದಿನಾಂಕ 27ರಿಂದ ಮನೆಯಿಂದಲೇ ಹೋರಾಟ ಕೈಗೊಂಡಿದ್ದು, ಅಂತೆಯೇ ಜಿಲ್ಲೆಯಲ್ಲೂ ಪಿಂಚಣಿ ವಂಚಿತ ನೌಕರರು ಹೋರಾಟ ಆರಂಭಿಸಿದ್ದಾರೆ.

2006 ಏಪ್ರಿಲ್ 4ರಿಂದ ಅನುದಾನಿತ ವಿದ್ಯಾಸಂಸ್ಥೆಗಳ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿಯಾಗಲೀ, ವಂತಿಗೆ ಆಧಾರಿತ ಹೊಸ ಪಿಂಚಣಿ ಸೌಲಭ್ಯವಾಗಲೀ ಸಿಗುತ್ತಿಲ್ಲ. ದೇಶದ ಬೇರೆ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ವೇತನದ ಜೊತೆಗೆ ಪಿಂಚಣಿ ನೀಡುತ್ತಿದ್ದು, ಕರ್ನಾಟಕದಲ್ಲಿ ಮಾತ್ರ ಅನ್ಯಾಯವಾಗಿದೆ. ಈಗಾಗಲೇ ಸಾವಿರಾರು ನೌಕ ರರು ಪಿಂಚಣಿ ಪಡೆಯದೆ ಬರಿಗೈಯ್ಯಲ್ಲಿ ನಿವೃತ್ತರಾಗಿ ದ್ದಾರೆ. ಅಕಾಲಿಕ ಮರಣ ಹೊಂದಿರುವವರ ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ ಎಂದು ಅಳಲು ತೋಡಿಕೊಂಡಿದ್ದಾರೆ.

ಈ ವಿನೂತನ ಹೋರಾಟವು ಇದೇ 31ರವರೆಗೂ ನಡೆಯಲಿದೆ. ಇನ್ನಾದರೂ ಸರ್ಕಾರ ಹುಸಿ ಭರವಸೆ ಬದಲಿಗೆ ಪಿಂಚಣಿ ವಂಚಿತ ನೌಕರರ ಬೇಡಿಕೆ ಈಡೇರಿಸಬೇಕು. 

ಇಲ್ಲವಾದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಸಂಚಾಲಕ ವಿರೂಪಾಕ್ಷಪ್ಪ ಮಂತ್ರೋಡಿ ಎಚ್ಚರಿಸಿದ್ದಾರೆ.

Leave a Reply

Your email address will not be published.