ಶಾಸಕ ಎಸ್.ವಿ.ಆರ್‌. ಗೆ ಎಸ್ಟಿ ಅಭಿವೃದ್ಧಿ ನಿಗಮ : ಜಗಳೂರಿನಲ್ಲಿ ಸಂಭ್ರಮ

ಶಾಸಕ ಎಸ್.ವಿ.ಆರ್‌. ಗೆ ಎಸ್ಟಿ ಅಭಿವೃದ್ಧಿ ನಿಗಮ : ಜಗಳೂರಿನಲ್ಲಿ ಸಂಭ್ರಮ

ಜಗಳೂರು, ಜು.27- ಶಾಸಕ ಎಸ್.ವಿ.ರಾಮಚಂದ್ರ ಅವರಿಗೆ ರಾಜ್ಯ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ತಾಲ್ಲೂಕಿನ ಬಿಜೆಪಿ ಕಾರ್ಯಕರ್ತರು ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. 

ಪಟ್ಟಣ ಪಂಚಾಯತ್ ಸದಸ್ಯರಾದ ಆರ್.ತಿಪ್ಪೇಸ್ವಾಮಿ, ಪಾಪ ಲಿಂಗಪ್ಪ, ನವೀನ್ ಕುಮಾರ್, ರೇವಣ್ಣ ಮುಖಂಡರಾದ ರವಿಕುಮಾರ್ ಓಬಳೇಶ್,
ಕೆ.ಎಸ್.ಪ್ರಭು, ಕಾಂತರಾಜ್, ನಾಯಕ ಸಮಾಜದ ಕಾರ್ಯದರ್ಶಿ
ಸೂರಲಿಂಗಪ್ಪ, ವಕೀಲ ಎಂ.ಜೆ.ತಿಪ್ಪೇಸ್ವಾಮಿ ಸೇರಿದಂತೆ ನೂರಾರು ಜನ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published.