ರೋಡಿಗೆ ಬಿದ್ದ ಮೋಡಣ್ಣ

ರೋಡಿಗೆ ಬಿದ್ದ ಮೋಡಣ್ಣ

ಆಕಾಶ್ದಿಂದ ರೋಡೀಗ್ಬಿದ್ದ ಬೆಳ್ಳಿಮೋಡದ್ಗುಡ್ಡಾ
ತೇಲ್ಕೊಂಡ್ಹೋಗಿ ಹೊಲ್ಗಳ್ಮೇಲೆ ಸುರ್ಸೋನೀರ್ನ ಹೆಡ್ಡಾ !
ಭೂಮ್ತಾಯ್ಮಡ್ಳಿಗೆ ಸುರ್ದೀವೋ ಉಣ್ಣೋ ಕಾಳ್ಗಳ್ನೆಲ್ಲಾ
ಮಕ್ಳುಮುದಕ್ರು ಸಾಯ್ತವ್ರೊ ಹಸ್ಕೊಂಡ್ ಕೂಳ್ನೀರಿಲ್ದಾ !
ಇಳೇಲ್ಕಣ್ಕಣ್ಬಿಡೊ ಮೊಳ್ಕೆ ಗರಿಗೆದ್ರಿ ನಲೀಲಿ ಹಸಿರ್ಬೆಳೆ
ಮೋಡಣ್ಬಂದ ಮಳೆಹನಿತಂದ ಅಂತಾವೆ ಬೇರುಚಿಗುರೂ
ಎದ್ದೇಳಣ್ಣಾ ಮೇಲ್ಕೇರಣ್ಣಾ ತೊಟ್ಟಿಕ್ಭೂತಾಯ್ತುಂಬ
ಅಳ್ತಾವ್ನದೀ ಗುಡ್ಗಾಡ್ಹಳ್ಳ ಸರ್ನೋಡ್ ನಮ್ಮೋಡಣ್ಣಾ.


ಆರ್.ಶಿವಕುಮಾರಸ್ವಾಮಿ ಕುರ್ಕಿ
shivukurki1@gmail.com

 

Leave a Reply

Your email address will not be published.