ಭತ್ತದ ನಾಟಿ ಯಂತ್ರದ ಪ್ರಾತ್ಯಕ್ಷಿಕೆ

ಭತ್ತದ ನಾಟಿ ಯಂತ್ರದ ಪ್ರಾತ್ಯಕ್ಷಿಕೆ

ದಾವಣಗೆರೆ, ಜು.25- ತಾಲ್ಲೂಕಿನ ಎಲೆಬೇತೂರು ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಸಂಸ್ಥೆಯಿಂದ ಯಾಂತ್ರೀಕೃತ ಭತ್ತದ ನಾಟಿ ಯಂತ್ರ ಅಳವಡಿಕೆ ಪ್ರಾತ್ಯಕ್ಷಿಕೆಯನ್ನು ರೈತ ಬಿ. ನಾಗರಾಜ್ ಜಮೀನಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಯೋಜನೆ ಅಧಿಕಾರಿ ಪದ್ಮಯ್ಯ ಮಾತನಾಡಿ, ಭತ್ತದ ನಾಟಿ ಯಂತ್ರದಿಂದ ನಾಟಿ ಮಾಡಿದರೆ ಆರ್ಥಿಕವಾಗಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯವನ್ನು ಗಳಿಸಬಹುದು. ಯಂತ್ರ ಕಡಿಮೆ ಬಾಡಿಗೆಗೆ ನಮ್ಮ ಸಂಸ್ಥೆಯಿಂದ ದೊರಕುತ್ತದೆ ಎಂದರು. 

ಗ್ರಾಮದ ಮುಖಂಡ ಎಚ್. ಬಸವರಾಜಪ್ಪ ಮಾತನಾಡಿ, ಯಾಂತ್ರೀಕೃತ ನಾಟಿಯಿಂದ ಕೂಲಿ ಕಾರ್ಮಿಕರ ಸಮಸ್ಯೆ, ಬೀಜ ಉಳಿತಾಯ, ಕಳೆ ನಿಯಂತ್ರಣ, ಸಮಯಕ್ಕೆ ಸರಿಯಾಗಿ ನೀರು, ಗೊಬ್ಬರ ನಿರ್ವಹಣೆ, ಸಾವಯವ ಗೊಬ್ಬರ ಬಳಕೆಯಿಂದ ನಾವು ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು ಎಂದು ತಿಳಿಸಿದರು.

ಬಿ. ವಿರೂಪಾಕ್ಷಪ್ಪ, ರೈತ ಬಿ. ನಾಗರಾಜಪ್ಪ, ಕೃಷಿ ಸಹಾಯಕ ಅಧಿಕಾರಿ ಬಿ. ದುರುಗಪ್ಪ ಮಾತನಾಡಿದರು. ಗ್ರಾಮದ ರೈತ ಮುಖಂಡರಾದ ಎಂ.ಪತ್ರಿ ಬಸಪ್ಪ, ಎಂ. ಬಸವರಾಜಪ್ಪ, ಜಿ.ಪಂ. ಮಾಜಿ ಸದಸ್ಯ ಬಿ. ಕರಿಬಸಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ. ಪ್ರಭು, ಎಪಿಎಂಸಿ ಸದಸ್ಯ ಟಿ. ರಾಜಪ್ಪ, ದಾವಣಗೆರೆ ಅಡಿಕೆ ಸೊಸೈಟಿ ನಿರ್ದೇಶಕ ಮಠದ ಬಸವರಾಜಯ್ಯ, ಗ್ರಾ.ಪಂ. ಅಧ್ಯಕ್ಷೆ ರತ್ಮಮ್ಮ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕ ಎಂ. ಷಡಾಕ್ಷರಪ್ಪ, ಸಂಸ್ಥೆಯ ಕೃಷಿ ಮೇಲ್ವಿಚಾರಕರಾದ ವಿಜಯಕುಮಾರ್, ದೇವಮ್ಮ ಪ್ರವೀಣ್, ನೇತ್ರಾವತಿ  ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published.