ಕಾರ್ಗಿಲ್ ವಿಜಯೋತ್ಸವಕ್ಕೆ ಪರಿಸರ ಸ್ನೇಹಿ ರಾಖಿ, ಗ್ರೀಟಿಂಗ್ಸ್ ಸಿದ್ಧತೆ

ಕಾರ್ಗಿಲ್ ವಿಜಯೋತ್ಸವಕ್ಕೆ  ಪರಿಸರ ಸ್ನೇಹಿ ರಾಖಿ, ಗ್ರೀಟಿಂಗ್ಸ್ ಸಿದ್ಧತೆ

ದಾವಣಗೆರೆ, ಜು.25- ಕಾರ್ಗಿಲ್ ವಿಜಯೋತ್ಸವ ಪ್ರತಿಯೊಬ್ಬ ಭಾರತೀಯ ಯೋಧರನ್ನು ಸ್ಮರಿಸುವ ದಿನವಾಗಿದ್ದು, ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಶ್ರಮಿಸುತ್ತಿರುವ ಯೋಧರಿಗೆ ಕೃತಜ್ಞತೆ ತಿಳಿಸಲು ಬಣ್ಣ ಬಣ್ಣದ ಗ್ರೀಟಿಂಗ್ಸ್ ಮತ್ತು ಸಹೋದರತೆಯನ್ನು ಸಾರುವ ರಕ್ಷಾಬಂಧನದ ರಾಖಿಯನ್ನು ದಾವಣಗೆರೆ ಲೀಡ್ ವಿದ್ಯಾರ್ಥಿಗಳು ತಯಾರಿಸಿ, ಗಡಿಯಲ್ಲಿರುವ ಸೈನಿಕರಿಗೆ ಕಳುಹಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ನಗರದ ಲೀಡರ್ ಎಕ್ಸಲ್‌ರೇಟಿಂಗ್ ಡೆವಲಪ್‌ಮೆಂಟ್ ಪ್ರೋಗ್ರಾಂ ಸಹಯೋಗದಲ್ಲಿ ಬಾಪೂಜಿ ಪಾಲಿಟೆಕ್ನಿಕ್, ಡಿಆರ್‌ಎಂ ವಿಜ್ಞಾನ ಕಾಲೇಜು, ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು 200 ಕ್ಕೂ ಹೆಚ್ಚು ಶುಭಾಶಯ ಪತ್ರಗಳು ಮತ್ತು ಹಣ್ಣಿನ ಬೀಜ ಮತ್ತು ಗೋಧಿ, ಜೋಳ ಧಾನ್ಯಗಳ ಬಳಕೆಯಿಂದ ರಾಖಿಯನ್ನು ತಯಾರಿಸಿದ್ದಾರೆ. ಲೀಡ್‌ ಕಾರ್ಯಕ್ರಮ ವ್ಯವಸ್ಥಾಪಕ ಕೃಷ್ಣಾಜಿ ಮೋರೆ ನೇತೃತ್ವದಲ್ಲಿ ಜೀವಿತಾ, ಅಮೃತಾ ಮಾನಸ, ಅಂಬಿಕ ಮತ್ತು ವಿನಯ ತಯಾರಿಸಿದ್ದಾರೆ.

Leave a Reply

Your email address will not be published.