ಹರಪನಹಳ್ಳಿ : ಮುಂದುವರೆದ ಕೊರೊನಾ

ಹರಪನಹಳ್ಳಿ : ಮುಂದುವರೆದ ಕೊರೊನಾ

ಹರಪನಹಳ್ಳಿ,ಜು.24-  ತಾಲ್ಲೂಕಿನಲ್ಲಿ ಶುಕ್ರವಾರ ಮೂರು ಜನರಿಗೆ ಕೋವಿಡ್ ಸೋಂಕು ದೃಢ ಪಟ್ಟಿದೆ. ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ 14 ವರ್ಷದ ಹುಡುಗನಿಗೆ ಹಾಗೂ 55 ವರ್ಷದ ವ್ಯಕ್ತಿಗೆ ಸೋಂಕು ಆವರಿಸಿದೆ. ಈ ಇಬ್ಬರಿಗೂ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲವಾಗಿದ್ದು, ಇಬ್ಬರು ಊರು ಬಿಟ್ಟು ಎಲ್ಲೂ ಹೋಗಿಲ್ಲ, ಈ ಹಿಂದೆ  ಈ ಗ್ರಾಮದಲ್ಲಿ ಒಬ್ಬರಿಗೆ ಸೋಂಕು ಬಂದಿತ್ತು, ರಾಂಡಮ್ ಆಗಿ ಪರೀಕ್ಷೆ ಮಾಡಿದಾಗ ಇಬ್ಬರಿಗೆ ಪಾಸಿಟಿವ್ ಬಂದಿದೆ.

 ಈ ಇಬ್ಬರಿಗೆ ಪ್ರಾಥಮಿಕ 6 ಹಾಗೂ ದ್ವಿತೀಯ 22 ಸಂಪರ್ಕಿತರನ್ನು ಗುರುತಿಸಲಾಗಿದೆ,  ಹರಪನಹಳ್ಳಿ ಪಟ್ಟಣದ ಆಚಾರ ಬಡಾವಣೆಯಲ್ಲಿ 31 ವರ್ಷದ ಎಸ್ ಬಿ ಐ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಸೋಂಕು ದೃಢ ಪಟ್ಟಿದೆ. ಇವರು ಕಳೆದ 6 ರಂದು ಆಂಧ್ರ ಪ್ರದೇಶಕ್ಕೆ ಹೋಗಿ ಬಂದಿದ್ದರು ಎಂದು ಮೂಲಗಳು ತಿಳಿಸಿವೆ.

5ನೇ ವಾರ್ಡ್ ಪುರಸಭೆ ಸದಸ್ಯ ಹೆಚ್.ಎಂ.ಅಶೋಕ್ ನೇತೃತ್ವದಲ್ಲಿ ಪುರಸಭೆ ಸಿಬ್ಬಂದಿ ಆಚಾರ್ಯ ಬಡಾವಣೆಯಲ್ಲಿ ಸ್ಯಾನಿಟೈಸ್ ಮಾಡಿ ಮನೆಯ ಸುತ್ತ ಸೀಲ್‍ಡೌನ್ ಮಾಡಲಾಗಿದೆ. 

ಈ ಬ್ಯಾಂಕ್ ಉದ್ಯೋಗಿಯ ಸಂಪರ್ಕಕ್ಕೆ ಬಂದಿ ರುವ 6 ಪ್ರಾಥಮಿಕ ಹಾಗೂ 12 ದ್ವಿತೀಯ ಸಂಪರ್ಕಿತ ರನ್ನು ಶಿಕ್ಷಣ ಇಲಾಖೆಯವರು ಗುರುತಿಸಿದ್ದಾರೆ. ಹಾಗೂ ಇವರ ಸಂಪರ್ಕಕ್ಕೆ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಯೊಬ್ಬರು ಬಂದಿರುವುದರಿಂದ ಪಟ್ಟಣದಲ್ಲಿರುವ ಸಿಂಡಿಕೇಟ್ ಬ್ಯಾಂಕಿನ ಎಲ್ಲಾ ಸಿಬ್ಬಂದಿಗೆ ಹೋಂ ಕ್ವಾರಂಟೈನ್‍ನಲ್ಲಿ ಇರಲು ಸೂಚಿಸಲಾಗಿದೆ.

Leave a Reply

Your email address will not be published.