ನಿನ್ನ ಅಂತ್ಯ ಎಂದಿಗೆ?

ನಿನ್ನ ಅಂತ್ಯ ಎಂದಿಗೆ?

ಕ-ಕಣ್ಣಿಗೆ
ಕಾ-ಕಾಣದೇ
ಕಿ-ಕಿವಿಗೆ ಕೇಳದೇ
ಕೀ-ಕೀಟಲೆ ಮಾಡುತ್ತ
ಕು-ಕುಬೇರರನ್ನು
ಕೂ-ಕೂಗಿಕೊಂಡರೂ ಬಿಡದೇ
ಕೃ-ಕೃತಾರ್ಥರಾದವರನ್ನೂ
ಕೆ-ಕೆಳವರ್ಗದ ಕಡು ಬಡವರನ್ನೂ ಬಿಡದೇ
ಕೇ-ಕೇಕೆ ಹಾಕುತ್ತಾ
ಕೈ-ಕೈಲಾಗದವರನ್ನು ಕೊಲ್ಲುತ್ತಿರುವ
ಕೊ-ಕೊರೊನಾ
ಕೋ-ಕೋವಿಡ್-19 ಹೆಸರಿನಿಂದ
ಕೌ-ಕೌರವ ಹಾಗೂ
ಕಂ-ಕಂಸನಂತೆ
ಕಹ ಕಹ ನಗುತ್ತಿರುವ ನಿನ್ನ ಅಂತ್ಯ ಎಂದಿಗೆ?


ಗುರುಪ್ರಸಾದ್ ಜಗಳೂರು
ದಾವಣಗೆರೆ.
guruprasadjagalur@gmail.com

Leave a Reply

Your email address will not be published.