ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳ ನೇಮಕ

ದಾವಣಗೆರೆ, ಜು.22- ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳ ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರುಗಳ ನೇಮಕ ಇತ್ತೀಚೆಗೆ ನಡೆದಿದೆ.

ಪ್ರಧಾನ ಕಾರ್ಯದರ್ಶಿಗಳಾಗಿ ರಾಜು ನೀಲ ಗುಂದ, ವೈ.ಟಿ. ಗುರುಪ್ರಸಾದ್, ಉಪಾಧ್ಯಕ್ಷರುಗಳಾಗಿ ಮಲ್ಲಿಕಾರ್ಜುನ್ ಬಸಾಪುರ, ಕಿಶೋರ್ ಮಡಿವಾಳ, ಎಂ.ಬಿ. ಪ್ರಕಾಶ್, ಶಾಂತಮ್ಮ, ಶಂಕರಗೌಡ ಬಿರಾದಾರ್, ಸುಮ, ಕಾರ್ಯದರ್ಶಿಗಳಾಗಿ ಹೆಚ್.ಎನ್. ಜಗದೀಶ್, ಎಸ್. ಬಾಲಚಂದ್ರಶೆಟ್ಟಿ, ಕೆ. ತಿಪ್ಪೇಶ್, ನಾಗೇಂದ್ರ ಸಿ. ಪಾಲಂಕರ್, ಹೆಚ್. ಮಾಲಾಶ್ರೀ, ರಾಜೇಶ್ವರಿ, ಖಜಾಂಚಿ ಹೆಚ್.ಜಿ. ಕರಿಬಸಪ್ಪ ಹಾಗೂ ಕಾರ್ಯಾಲಯ ಕಾರ್ಯದರ್ಶಿ ವೈ. ಶಿವಾನಂದ ನೇಮಕಗೊಂಡಿದ್ದಾರೆ.

ವಿವಿಧ ಮೋರ್ಚಾಗಳ ಅಧ್ಯಕ್ಷರುಗಳ ನೇಮಕಾತಿ ನಡೆಯಿತು. ರೈತ ಮೋರ್ಚಾ ಅಧ್ಯಕ್ಷರಾಗಿ ಎಂ.ಎಂ. ಮಂಜುನಾಥ್, ಒಬಿಸಿ ಮೋರ್ಚಾ ಅಧ್ಯಕ್ಷರಾಗಿ ನಿಂಗೋಜಿರಾವ್, ಎಸ್ಸಿ ಮೋರ್ಚಾ ಅಧ್ಯಕ್ಷರಾಗಿ ಅಂಜಿನಪ್ಪ ಎಂ. ಶಾಮನೂರು, ಯುವ ಮೋರ್ಚಾ ಅಧ್ಯಕ್ಷರಾಗಿ ಬಿ. ರಾಕೇಶ್, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಜಯಲಕ್ಷ್ಮಿ ಆರ್. ರಘು ಹಾಗೂ ಎಸ್ಟಿ ಮೋರ್ಚಾ  ಅಧ್ಯಕ್ಷರಾಗಿ ಎಸ್. ಗುರುಮೂರ್ತಿ ತುರ್ಚಘಟ್ಟ ನೇಮಕಗೊಂಡಿದ್ದಾರೆ.

Leave a Reply

Your email address will not be published.