ಕುಟುಂಬ ಸಮೇತವಾಗಿ ‘ಆಶಾ’ ಆನ್‌ಲೈನ್ ಚಳುವಳಿ

ಕುಟುಂಬ ಸಮೇತವಾಗಿ ‘ಆಶಾ’ ಆನ್‌ಲೈನ್ ಚಳುವಳಿ

ದಾವಣಗೆರೆ, ಜು.17- ಮಾಸಿಕ 12 ಸಾವಿರ ರೂ. ಗೌರವ ಧನ ಖಾತರಿ ಪಡಿಸಬೇಕೆಂಬುದು ಸೇರಿದಂತೆ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಆಶಾ ಕಾರ್ಯ ಕರ್ತೆಯರು ಆರೋಗ್ಯ ಸೇವೆ ಸ್ಥಗಿತಗೊಳಿಸಿ ಕೈಗೊಂಡಿರುವ ಅನಿರ್ದಿಷ್ಟ ಹೋರಾಟ ಇಂದಿಗೆ 8
ದಿನಗಳನ್ನು ಪೂರೈಸಿದೆ.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘಟನೆಯ ಕರೆಯ
ಮೇರೆಗೆ ಹೋರಾಟದ ಭಾಗವಾಗಿ ಇಂದು ಆಶಾ ಕಾರ್ಯಕರ್ತೆಯರು ತಮ್ಮ ಕುಟುಂಬ ಸಮೇತರಾಗಿ ಹಾಗೂ ತಾವು ಆರೋಗ್ಯ ಸೇವೆ ನೀಡಿದ ಜನಸಾಮಾನ್ಯರಿಂದ ಹಕ್ಕೊತ್ತಾಯಗಳ ಪೋಸ್ಟರ್ ಗಳ ಹಿಡಿದು ಫೋಟೋ ತೆಗೆದುಕೊಂಡು ಆನ್ ಲೈನ್ ಚಳವಳಿ ಕೈಗೊಂಡರು.

ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು, ತಾಲ್ಲೂಕು ಅಧ್ಯಕ್ಷೆ ಭಾರತಿ, ಮಧು ತೊಗಲೇರಿ, ಕರಿಯಮ್ಮ, ಅನಿತಾ, ಲಲಿತಮ್ಮ, ಮಂಜುಳಮ್ಮ, ದೇವಮ್ಮ, ನೀಲಮ್ಮ, ಸವಿತಾ  ಶೈಲಾ, ಆಶಾ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published.