ಚಾಚಿ ನೆರವಿನ ಹಸ್ತ ರೈತನತ್ತ

ಚಾಚಿ ನೆರವಿನ ಹಸ್ತ ರೈತನತ್ತ

ಸರ್ಕಾರದ ಯೋಜನೆಗಳು ಅಪಾರ
ಸಿಕ್ಕಿಲ್ಲ ರೈತರಿಗೆ ಸಹಕಾರ
ಅಧಿಕಾರಿಗಳಿಗೆ ಹಣದ ಅತಿವೃಷ್ಟಿ
ಶ್ರಮಿಕರ ಮೇಲೆ ಯಮನ ಕುದೃಷ್ಟಿ. 

ಬೆಳೆ ಹಾನಿ ಪರಿಹಾರ ಹೆಸರಲಿ
ಸಂತೃಪ್ತಿ ಅಧಿಕಾರಿಗಳ ಸಂಸಾರಕೆ
ಪರದಾಟ ನೇಗಿಲ ಯೋಗಿಗೆ
ಎರೆಯಬೇಕು ಲಂಚದ ನೀರ.

ಖಾತೆಗಳಿಗೆ ಕಿತ್ತಾಟ ರಾಜಕೀಯದಲ್ಲಿ
ಅನ್ನದಾತ ಸಾಯುತಿಹನು ನಾಡಲ್ಲಿ
ಬೊಕ್ಕಸದಿ ದೊಡ್ಡ ಹುಂಡಿ ಕಾಸು
ರೈತರ ಕೈಗೆ ಪುಡಿ ಕಾಸು.

ಮತ್ತಿದರ ಮೇಲೆ ಭೂ ತಾಯಿ ಮುನಿಸು
ಮಳೆರಾಯನ ಜೂಜಾಟ
ಜಜ್ಜಿ ಹೋಗದೇನು ಮನಸು.
ನೆಲ ಕಡಿದ ಕೈಗಳು
ಮರಗಟ್ಟಿ ಕಲ್ಲಾಗಿಹವು
ಕಾಯಕಕೆ ಹರಿಸಿದ ಬೆವರಿನ ಜತೆ
ಹರಿದಿದೆ ರಕ್ತ ಕಣ್ಣೀರು.

ಕಾಯಕ ಯೋಗಿ ನಿಲ್ಲಿಸಲು ಮಂತ್ರ
ತಲೆ ಕೆಳಗಾಗುವುದು ಜಗದ ತಂತ್ರ
ಹಸಿದ ಒಡಲ ನೋವ ಅರಿಯಿರಿ
ಆತನೇಳ್ಗೆಗೆ ಸಹಾಯ ಹಸ್ತ ಚಾಚಿರಿ.


ತಿಮ್ಮೇಶ್ ಅಣಬೇರು
901 977 2150
blgnittur123@gmail.com

 

Leave a Reply

Your email address will not be published.