ಕೊರೊನಾ ನಿರ್ವಹಣೆಯಲ್ಲಿ ಅವ್ಯವಹಾರ

ಕೊರೊನಾ ನಿರ್ವಹಣೆಯಲ್ಲಿ ಅವ್ಯವಹಾರ

ನ್ಯಾಯಾಂಗ ತನಿಖೆಗೆ ಎಐವೈಎಫ್ ಆಗ್ರಹ

ದಾವಣಗೆರೆ, ಜು.13- ಕೊರೊನಾ ಚಿಕಿತ್ಸಾ ಸಲಕರಣೆಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಅವ್ಯವಹಾರ ನಡೆಸಿದೆ ಎಂಬ ವಿರೋಧ ಪಕ್ಷದ ನಾಯಕರ ಆರೋಪದ ಹಿನ್ನೆಲೆಯಲ್ಲಿ ಈ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ರಾಜ್ಯಪಾಲರನ್ನು ಒತ್ತಾಯಿಸಿ, ನಗರದಲ್ಲಿ ಇಂದು ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್) ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. 

ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ಸಮಿತಿ ಕಾರ್ಯಕರ್ತರು, ನಂತರ ಉಪವಿಭಾಗಾ ಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. 

ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಪಡೆಯುವಂತೆ ಸುಗ್ರೀವಾಜೆ ಹೊರಡಿಸಬೇಕು. ವೈದ್ಯ ವಿದ್ಯಾರ್ಥಿಗಳ ಶಿಷ್ಯ ವೇತನದ ಸಮಸ್ಯೆಯನ್ನು ರಾಜ್ಯ ಸರ್ಕಾರ ಬಗೆಹರಿಸಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರ ಮನೆ ಮೇಲೆ ಕಲ್ಲು ತೂರಾಟ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಬೇಕು. ಆಟೋ, ಟ್ಯಾಕ್ಸಿ ಚಾಲಕರು ಮತ್ತು ಕಟ್ಟಡ ಕಾರ್ಮಿಕರಿಗೆ ಕೊರೊನಾ ಪರಿ ಹಾರ ರೂ.5 ಸಾವಿರ ಸಹಾಯಧನ ಎಲ್ಲರಿಗೂ ತಲುಪುವಂತೆ ಅಧಿಕಾರಿಗಳಿಗೆ ಸೂಚನೆ ಕೊಡ ಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನಾಕಾರರು ಆಗ್ರಹಿಸಿದರು. 

ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಉಪಾ ಧ್ಯಕ್ಷ ಆವರಗೆರೆ ವಾಸು, ಜಿಲ್ಲಾಧ್ಯಕ್ಷ ಕೆರನಹಳ್ಳಿ ರಾಜು, ಕಾರ್ಯದರ್ಶಿ ಎ. ತಿಪ್ಪೇಶಿ, ಗದಿಗೇಶ್ ಪಾಳೇದ, ಫಜಲುಲ್ಲಾ, ಇರ್ಫಾನ್, ಹೆಚ್.ಎಂ. ಮಂಜುನಾಥ, ಮಂಜುನಾಥ ದೊಡ್ಡಮನೆ, ಮಂಜುನಾಥ ಹರಳಯ್ಯನಗರ, ರುದ್ರೇಶ್ ಮಳಲಕೆರೆ, ಅಂಜಿನಪ್ಪ ಮಳಲಕೆರೆ, ಮಂಜು ನಾಥ ಮಳಲಕೆರೆ, ಎಸ್.ಓ.ಜಿ ಲೋಹಿತ್, ಎ. ರಂಗಸ್ವಾಮಿ, ಮಂಜುನಾಥ ಪಿಗ್ನಿ, ಹನುಮಂ ತಪ್ಪ, ಎ. ಮಂಜುನಾಥ್, ಪರಶುರಾಮ್ ಹೆಚ್. ಗುಡಾಳ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published.