ಹರಪನಹಳ್ಳಿಯಲ್ಲಿ ಮೊಬೈಲ್ ಸ್ಫೋಟ : ತಪ್ಪಿದ ಅನಾಹುತ

ಹರಪನಹಳ್ಳಿ: ಜು.8. ಮೊಬೈಲ್ ಸ್ಫೋಟಗೊಂಡು ಅಂಗಡಿಯಲ್ಲಿದ್ದವರು ಸ್ವಲ್ಪದರಲ್ಲಿಯೇ ಅಪಾಯದಿಂದ ಪಾರಾದ ಘಟನೆ ಪಟ್ಟಣದ ಟಿ.ವಿ.ಟ್ರಾನಿಕ್ಸ್ ಅಂಗಡಿಯಲ್ಲಿ ಜರುಗಿದೆ.

ಸ್ಥಳೀಯ ಗೌಳೇರ ಪೇಟೆಯಲ್ಲಿರುವ ಜ್ಯೋತಿ ಕಾಂಪ್ಲೆಕ್ಸ್ ನಲ್ಲಿ ಇರುವ ಟಿ.ವಿ.ಟ್ರಾನಿಕ್ಸ್ ಅಂಗಡಿಯಲ್ಲಿ ಮಾಲೀಕ ಟಿ.ಜಯರಾಂ ಅವರ ಪತ್ನಿ ಟಿ.ವೈದೇಹಿ ಅವರ ಎಂ.ಐ ಕಂಪನಿಯ ನೋಟ್ 4 ಮಾದರಿಯ ಮೊಬೈಲ್ ಸ್ಟೋಟಗೊಂಡಿದೆ.

ವೈದೇಹಿ ಅವರು ಅಂಗಡಿಯಲ್ಲಿ ಸದರಿ ಮೊಬೈಲ್ ನಲ್ಲಿ ಅಶೋಕ ಚಕ್ರ ಸೀರಿಯಲ್ ವೀಕ್ಷಿಸುತ್ತಿದ್ದಾಗ ಮೊಬೈಲ್ ಬಿಸಿಯಾಗಿ, ಚಿತ್ರಗಳು ಮಸುಕಾಗಿವೆ. ಆಗ ಅವರು ಪತಿ ಜಯರಾಮ ಬಳಿ ಅದನ್ನು ನೀಡಿದ್ದಾರೆ. ಜಯರಾಂ ಅವರು ಪರೀಕ್ಷಿಸುವ ಸಂದರ್ಭದಲ್ಲಿ ಮೊಬೈಲ್ ಸ್ಫೋಟಗೊಂಡಿದ್ದು, ಆಗ ಅವರು ಕೈ ಬಿಟ್ಟು ಓಡಿ ಹೋಗಿ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ, ಪತ್ನಿ ಹೆದರಿ ಕುಳಿತ ಜಾಗದಿಂದ ಹಿಂದಕ್ಕೆ ವಾಲಿದ್ದಾಳೆ. ಎದುರಿಗಿದ್ದ ಗ್ರಾಹಕ ಸಹ ಓಡಿ ಹೋಗಿದ್ದಾನೆ.

Leave a Reply

Your email address will not be published.