ಪೊಲೀಸ್ ಸ್ಟೇಷನ್ ಕಾಂಪೌಂಡ್ ಗೇಟ್ ಉದ್ಘಾಟನೆ

ಪೊಲೀಸ್ ಸ್ಟೇಷನ್  ಕಾಂಪೌಂಡ್ ಗೇಟ್ ಉದ್ಘಾಟನೆ

ದಾವಣಗೆರೆ, ಜು.7- ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ಲಿಮಿಟೆಡ್-ಗ್ರಾಮೀಣ ಕೂಟ, ದಾವಣಗೆರೆ ವಲಯದ ವತಿಯಿಂದ ಪಿ.ಜೆ. ಬಡಾವಣೆಯ ದಾವಣಗೆರೆ ಪೊಲೀಸ್ ಸ್ಟೇಷನ್‌ಗೆ ಕಾಂಪೌಂಡ್ ಗೇಟ್ ಅನ್ನು ಕೊಡುಗೆಯಾಗಿ ನೀಡಿದ್ದು, ಅಡಿಷನಲ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ರಾಜೀವ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಗ್ರಾಮೀಣ ಕೂಟದ ಪ್ರಾದೇಶಿಕ ವ್ಯವಸ್ಥಾಪಕ ಎಂ.ಆರ್. ಸಚಿನ್ ಕುಮಾರ್, ದಾವಣಗೆರೆ ವಲಯ ವ್ಯವಸ್ಥಾಪಕ ಕೆ.ಕೆ. ರಂಗನಾಥ್, ದಾವಣಗೆರೆ-2 ಶಾಖೆ ವ್ಯವಸ್ಥಾಪಕ ಜಿ.ಟಿ. ನಾಗರಾಜು, ಠಾಣೆಯ ಡಿವೈಎಸ್‌ಪಿ ನಾಗೇಶ್, ಸರ್ಕಲ್ ಇನ್ಸ್‌ಪೆಕ್ಟರ್ ತಿಮ್ಮಣ್ಣ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.