ಯುಬಿಡಿಟಿ ಕಾಲೇಜಿನ ಹೊರಗುತ್ತಿಗೆ ನೌಕರರ ಪ್ರತಿಭಟನೆ

ಯುಬಿಡಿಟಿ ಕಾಲೇಜಿನ ಹೊರಗುತ್ತಿಗೆ ನೌಕರರ ಪ್ರತಿಭಟನೆ

ಗ್ರಾಚ್ಯುಟಿ, ಗೌರವ ಧನಕ್ಕಾಗಿ ಆಗ್ರಹ

ದಾವಣಗೆರೆ, ಜು.6- ಕೆಲಸದಿಂದ ವಜಾಗೊಳಿಸಿರುವ ಹೊರಗುತ್ತಿಗೆ ನೌಕರರಿಗೆ ಗ್ರಾಚ್ಯುಟಿ, ಗೌರವ ಧನ ನೀಡುವುದು ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ನಗರದ ಯುಬಿಡಿಜಿ ಕಾಲೇಜಿನ ಮುಂಭಾಗದಲ್ಲಿ ಇಂದು ಕಾಲೇಜಿನ ಹೊರಗುತ್ತಿಗೆ ನೌಕರರು ಪ್ರತಿಭಟನಾ ಧರಣಿ ನಡೆಸಿದರು.

ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಲ ವಾರು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ 5 ಮಂದಿ ಸೆಕ್ಯೂರಿಟಿ ಗಾರ್ಡ್ ಗಳನ್ನು ಮತ್ತು 4 ಮಂದಿ ಅಟೆಂಡರ್ ಗಳನ್ನು ಏಕಾಏಕಿ ಸೇವಾ ನಿವೃತ್ತಿಯ ಕಾರಣವನ್ನು ನೀಡಿ ಅವರನ್ನು ವಜಾಗೊಳಿಸಿದ್ದು, ಇವರ ಸೇವೆಗೆ ಕಾರ್ಮಿಕ ಕಾಯ್ದೆ ಅನ್ವಯ ಗೌರವ ಧನ, ಗ್ರಾಚ್ಯುಟಿ ಹಣವನ್ನು ನೀಡಿಲ್ಲ. ಇವರಲ್ಲಿ ಕೆಲ ನೌಕರರ ವಯೋ ಮಿತಿ ಮೀರದಿದ್ದರೂ ನಿವೃ ತ್ತಿಯ ಕಾರಣ ನೀಡಿ ವಜಾಗೊಳಿಸಿ ರುವುದು ಅವೈಜಾನಿಕ ಎಂದು ಪ್ರತಿ ಭಟನಾಕಾರರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಅಧ್ಯಕ್ಷ ಮಂಜುನಾಥ ಕೈದಾಳೆ, ಕಾರ್ಯದರ್ಶಿ ಮಂಜು ನಾಥಕುಕ್ಕು ವಾಡ,  ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು, ಜಿಲ್ಲಾ ಸಂಘಟನಾಕಾರ ಪರಶುರಾಮ್, ಕಾರ್ಮಿಕರುಗಳಾದ ವಿರೂಪಾಕ್ಷಪ್ಪ, ರವಿ ಕುಮಾರ್, ರಾಘವೇಂದ್ರ, ವಿಶಾಲಾಕ್ಷಮ್ಮ, ಓಂಕಾರಪ್ಪ, ತಿಪ್ಪಣ್ಣ, ತುಕಾರಾಮ್, ಶಾರದಮ್ಮ, ರಾಜಶೇಖರಯ್ಯ, ಬಸವಂತಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published.