ರಾಣೇಬೆನ್ನೂರು ಸಂಪೂರ್ಣ ಲಾಕ್ ಡೌನ್

ರಾಣೇಬೆನ್ನೂರು  ಸಂಪೂರ್ಣ ಲಾಕ್ ಡೌನ್

ರಾಣೇಬೆನ್ನೂರು, ಜು. 6- ಕೊರೊನಾ ಹರಡದಂತೆ ಸರ್ಕಾರದ ಆದೇಶದ ಲಾಕ್‌ಡೌನ್ ಬೆಂಬಲಿಸಿದ ನಗರದ ಎಲ್ಲ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ತರಕಾರಿ, ಮಾಂಸ, ಮೀನು ಮಾರಾಟಗಾರರು, ಬೀದಿ ಬದಿಯ ಅಂಗಡಿಕಾರರು ಬಂದ್ ಮಾಡಿದ್ದರು.  ಔಷಧಿ ಅಂಗಡಿಗಳು ಮಾತ್ರ ತೆರೆದಿದ್ದು, ಕೊಳ್ಳುವ ವರರ ಸಂಖ್ಯೆ ಬೆರಳೆಣಿಕೆಯಷ್ಟು ಕಂಡುಬಂದಿತು. ಕೆಲಸವಿಲ್ಲದೆ ತಿರುಗುವವರ ಸಂಖ್ಯೆ ಸಹ ಹಿಂದಿಗಿಂತ ಕಡಿಮೆ ಇತ್ತು.

Leave a Reply

Your email address will not be published.