ರಾಜೇಂದ್ರಬಾಬು ದಂಪತಿ ಅಮೆರಿಕಾ ಪ್ರವಾಸ ಅನುಭವ

ರಾಜೇಂದ್ರಬಾಬು ದಂಪತಿ ಅಮೆರಿಕಾ ಪ್ರವಾಸ ಅನುಭವ

‘ಪೂರ್ವಾ ಪರ’ ಪ್ರವಾಸ ಕಥನ ಬಿಡುಗಡೆ

ದಾವಣಗೆರೆ, ಜು.2- ನಗರದ ಆರ್ಥಿಕ ಸಲಹೆಗಾರ ರಾಜೇಂದ್ರಬಾಬು ಹಾಗೂ ನಿವೃತ್ತ ಉಪನ್ಯಾಸಕರಾದ ಶ್ರೀಮತಿ ನಿರ್ಮಲಾ ದಂಪತಿಯ ಅಮೆರಿಕಾ ಪ್ರವಾಸದ ಅನುಭವ ಕಥನ `ಪೂರ್ವಾ ಪರ’ ಕೃತಿ ಯನ್ನು ಅನಾವರಣಗೊಳಿಸಲಾಯಿತು.

ಕೃತಿಯನ್ನು ಬಿಡುಗಡೆಗೊಳಿಸಿದ ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್ ಅವರು, ರಾಜೇಂದ್ರಬಾಬು ಅವರ ಸ್ನೇಹಿತ ಎಂ.ಪಿ.ಗುರುರಾಜ ಅವರು ಪ್ರವಾಸದ ಅನುಭವವನ್ನು ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಹೊಸದಾಗಿ ಅಮೆರಿಕಾಕ್ಕೆ ಹೋಗುವವರಿಗೆ ಈ ಕೃತಿ ಮಾರ್ಗಸೂಚಿಯಾಗಲಿದೆ. ಸಾಹಿತ್ಯದ ಲೇಪನವನ್ನೂ ಇದರಲ್ಲಿ ಕಾಣಬಹುದು ಎಂದು ಹೇಳಿದರು.

ನಿರ್ಮಲಾ ರಾಜೇಂದ್ರಬಾಬು ಮಾತನಾಡಿ, 20 ದಿನಗಳ ಕಾಲ ಅಲ್ಲಿ ಕಳೆದ ಅನುಭವವನ್ನು ತಾನು ಕೃತಿಯ ಎರಡನೇ ಭಾಗದಲ್ಲಿ ಬರೆದಿದ್ದೇನೆ ಎಂದು ಹೇಳಿದರು.

Leave a Reply

Your email address will not be published.