ನೆಲಗಳ್ಳ ಡ್ರಾಗನ್ ಕೇಡಿ…!

ನೆಲಗಳ್ಳ ಡ್ರಾಗನ್ ಕೇಡಿ…!

ನೆಲ ನುಂಗಲು ಬರುವ
ಡ್ರಾಗನ್ ಹೇಡಿ.. ಹೇಡಿ..

ಕಟ್ಟಿಗೆ ತುಂಡಿಗೆ ಮೊಳೆ
ಬಡಿದು ತಂದ ರಾಡೀ.. ರಾಡೀ..

ಇನ್ನು ನಿನ್ನಾಟ ಸಾಗದು ತೆಪ್ಪಗೆ ನಡೀ..

ನಿನ್ನ ಶವ ಪೆಟ್ಟಿಗೆಗೆ ನೀನೇ
ಮೊಳೆ ಹೊಡೀ.. ಹೊಡೀ..

ಬಾವಲಿ ತಿಂದು ವಿಶ್ವಕ್ಕೆಲ್ಲಾ
ವೈರಸ್‌ ಹರಡೀ.. ಹರಡೀ..

ನಾನೇನೂ ಮಾಡಿಲ್ಲವೆಂದು
ಬಿಡುತ್ತಿರುವಿ ಬುರುಡೀ.. ಬುರುಡೀ..

ಲೋಕದ ಜನರೆಲ್ಲಾ ನಿನಗೆ ಬುದ್ಧಿ ಕಲಿಸಲು ಆಗಿದ್ದಾರೆ ರೆಡೀ..
ಬಾಲ ಸುಟ್ಟ ಬೆಕ್ಕಿನಂತೆ ಬಚ್ಚಿಟ್ಟುಕೊಳ್ಳುವಿ ತಡೀ.. ತಡೀ..

ಅಗ್ಗದ ಬೆಲೆಯಲಿ ಮುಗ್ಗಿದ ಸರಕನು ಮಾಡೀ.. ಮಾಡೀ..
ವಿಶ್ವ ಮಾರುಕಟ್ಟೆಯನೆ ಕಬಳಿಸುವ ಯೋಜನೆ ಹೂಡೀ.. ಹೂಡೀ..

ದೊಡ್ಡಣ್ಣನಾಗುವ ಹುಸಿಕನಸು ನಿನಗೇಕೋ ಕೇಡೀ.. ಕೇಡೀ..
ಇವನ ಮಾಲುಗಳನ್ನ ನಡುರಸ್ತೆಯಲ್ಲಿ ಸುಡೀ.. ಸುಡೀ..

ನಿನ್ನ ಬೆಂಬಲಿಸುವ ನಸಗುನ್ನಿ ದೇಶಗಳಾಗಲಿವೆ ಪುಡೀ.. ಪುಡೀ..
ಮುಖ ಮುಚ್ಚಿಕೊಂಡು ಜಾಗ ಖಾಲಿ ಮಾಡಲು ತಾಳ ತಂಬೂರಿ ಹಿಡೀ.. ಹಿಡೀ..

ನಮ್ಮ ಸೈನಿಕರು ಜಗಜಟ್ಟಿ ಸಮರ್ಥರು ಹೋರಾಡೀ.. ಆಡೀ..
ಅಂತ್ಯ ಸಂಸ್ಕಾರ ಮಾಡುವರು ನಿನಗೆ ನಮ್ಮ ಜಯಗೀತೆ ಹಾಡೀ..

ಭಾರತ ತ್ರಿವರ್ಣಧ್ವಜ ಮುಗಿಲೆತ್ತರ ಹಾರಾಡೀ.. ಹಾರಾಡೀ..
ಜಗತ್ತೇ “ಜಯ ಜಯ” ವೆನ್ನುತಿದೆ ನಮ್ಮ ಬಾವುಟ ನೋಡೀ.. ನೋಡೀ..

ಈ ಕವನ ನಿಮಗೆ ಇಷ್ಟವಾದರೆ ವಿನಿಮಯ ಮಾಡೀ.. ಮಾಡೀ..
ವಿದೇಶಿ ವಸ್ತುಗಳ ವ್ಯಾಮೋಹ ಮಾತ್ರ ಖಂಡಿತಾ ಬಿಡೀ.. ಬಿಡೀ..


ಎಚ್‌.ಬಿ. ಮಂಜುನಾಥ್
ಹಿರಿಯ ಪತ್ರಕರ್ತ, ದಾವಣಗೆರೆ.

Leave a Reply

Your email address will not be published.