ಜಿಲ್ಲಾಡಳಿತದಿಂದ ಸಾಂಖ್ಯಿಕ ದಿನಾಚರಣೆ

ಜಿಲ್ಲಾಡಳಿತದಿಂದ ಸಾಂಖ್ಯಿಕ ದಿನಾಚರಣೆ

ದಾವಣಗೆರೆ, ಜು.2- ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಜಿಲ್ಲಾಡಳಿತ ಇವರ ಸಂಯುಕ್ತಾಶ್ರಯದಲ್ಲಿ ಸಂಖ್ಯಾಶಾಸ್ತ್ರಜ್ಞ ಪ್ರೊ. ಪಿ.ಸಿ. ಮಹಾಲನೋಬಿಸ್ ಅವರ ಜನ್ಮದಿನ ಹಾಗೂ 14ನೇ ಸಾಂಖ್ಯಿಕ ದಿನಾಚರಣೆಯನ್ನು ಜಿಲ್ಲಾಡಳಿತ ಕಚೇರಿಯಲ್ಲಿ ನಿನ್ನೆ ನಡೆಸಲಾಯಿತು. 

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಪ್ರೊ. ಪಿ.ಸಿ. ಮಹಾಲನೋಬಿಸ್‌ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿ, ಅಭಿವೃದ್ಧಿಗೆ ಅಡಿಪಾಯವಾದ ಅಂಕಿ-ಅಂಶಗಳಿಗೆ ಸಂಬಂಧಿಸಿದಂತೆ ಮಹತ್ವದ ಕೊಡುಗೆಯನ್ನಿತ್ತಿರುವ ಪ್ರೊ. ಪಿ.ಸಿ. ಮಹಾಲನೋಬಿಸ್ ಎಲ್ಲರಿಗೂ ಆದರ್ಶನೀಯ ಎಂದರು.

ಅಪರ ಜಿಲ್ಲಾಧಿಕಾರಿ ಪೂಜಾರ ವೀರ ಮಲ್ಲಪ್ಪ ಮಾತನಾಡಿ, ಪ್ರಸ್ತುತ ಕೋವಿಡ್-19 ಪರಿಸ್ಥಿತಿಯನ್ನು ದಿಟ್ಟವಾಗಿ ಮತ್ತು ಆತ್ಮ
ವಿಶ್ವಾಸದಿಂದ ಎದುರಿಸಲು ಸಹಾಯ ಮಾಡು ತ್ತಿರುವುದು ಈ ಅಂಕಿ – ಅಂಶಗಳೇ. ಒಬ್ಬ ಕಾರ್ಮಿಕನಿಂದ ಹಿಡಿದು ಜಿಲ್ಲೆಯಲ್ಲಿ ಅಗತ್ಯ ವಾದ ಎಲ್ಲಾ ರೀತಿಯ ಅಂಕಿ-ಅಂಶಗಳನ್ನು ಸಂಗ್ರಹಿಸಿರುವುದರಿಂದಲೇ ಕೋವಿಡ್ ವಿರುದ್ಧ ಸಮರ ಸಾರಲು ಸಾಧ್ಯವಾಗಿದ್ದು, ಇದರಲ್ಲಿ ಎಲ್ಲರ ಪಾತ್ರ ಮುಖ್ಯ ಎಂದರು.

ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾತನಾಡಿದರು. `ಸುಸ್ಥಿರ ಅಭಿವೃದ್ಧಿ ಗುರಿ-03 ವಿಷಯ ಎಲ್ಲರಿಗೂ, ಎಲ್ಲಾ ವಯೋವೃ ದ್ಧರಲ್ಲಿ ಆರೋಗ್ಯಕರ ಜೀವನವನ್ನು ಖಾತ್ರಿ ಪಡಿಸಿ, ಯೋಗಕ್ಷೇಮವನ್ನು ಉತ್ತೇಜಿಸುವುದು’ ಕುರಿತು ಸಹಾಯಕ ಸಾಂಖ್ಯಿಕ ಅಧಿಕಾರಿ ವಿಜಯ್ ಬಡಿಗೇರ್ ಮಾತನಾಡಿದರು. `ಸುಸ್ಥಿರ ಅಭಿವೃದ್ಧಿ ಗುರಿ-05 ವಿಷಯ ಲಿಂಗ ಸಮಾನತೆಯನ್ನು ಸಾಧಿಸಿ ಮತ್ತು ಮಹಿಳೆಯರು ಹಾಗೂ ಹೆಣ್ಣುಮಕ್ಕಳನ್ನು ಸಶಕ್ತರನ್ನಾಗಿಸುವು ದು’ ವಿಷಯ ಕುರಿತು ಸಹಾಯಕ ಸಾಂಖ್ಯಿಕ ಅಧಿಕಾರಿ ಸಿದ್ದೇಶ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಘವೇಂದ್ರಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯ್‌ ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್, ಜಿಲ್ಲಾ ಪಂಚಾಯತ್ ಯೋ.ಅಂ.ಮೌ ಅಧಿಕಾರಿ ಶಾರದಾ ಜಿ ದೊಡ್ಡ ಗೌಡರ್, ಜಗಳೂರು ಇಓ ಮಲ್ಲಾನಾಯ್ಕ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಏಕನಾಥ, ಸಾಮಾಜಿಕ ಭದ್ರತೆ ಶಾಖೆಯ ಸಹಾಯಕ ನಿರ್ದೇಶಕರಾದ ನೀಲಮ್ಮ ಸೇರಿದಂತೆ, ಇತರೆ ಅಧಿಕಾರಿಗಳು ಹಾಜರಿದ್ದರು. 

ಸಾಂಖ್ಯಿಕ ಇಲಾಖೆಯ ಸಿಬ್ಬಂದಿ ರಂಜಿತಾ ಪ್ರಾರ್ಥಿಸಿದರು. ಮಂಗಳಾ ವಂದಿಸಿದರು.

Leave a Reply

Your email address will not be published.