ಗಾಂಧಿನಗರದಲ್ಲಿ ಡಿ.ಕೆ.ಶಿ ಪ್ರತಿಜ್ಞಾ ದಿನ ಕಾರ್ಯಕ್ರಮ

ಗಾಂಧಿನಗರದಲ್ಲಿ ಡಿ.ಕೆ.ಶಿ ಪ್ರತಿಜ್ಞಾ ದಿನ ಕಾರ್ಯಕ್ರಮ

ದಾವಣಗೆರೆ, ಜು.2- ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪ್ರತಿಜ್ಞಾ ದಿನ ಕಾರ್ಯಕ್ರಮವನ್ನು ಗಾಂಧಿನಗರದ  ಹೊರಟ್ಟಿ ದುರ್ಗಾಂಬಿಕಾ ದೇವಸ್ಥಾನದ ಶ್ರೀಮತಿ ಪಾರ್ವತಮ್ಮ ಶಾಮ ನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಬಿ.ಹೆಚ್. ವೀರಭದ್ರಪ್ಪ, ಉಪಾಧ್ಯಕ್ಷ ಬಿ.ಎಂ. ಈಶ್ವರ್, ಕಾರ್ಯದರ್ಶಿ ಜಿ. ರಾಕೇಶ್, ದಕ್ಷಿಣ ಬ್ಲಾಕ್ ಅಧ್ಯಕ್ಷ ಎಲ್.ಸಿ. ನೀಲಗಿರಿ (ನಿಖಿಲ್), ಕೆಪಿಸಿಸಿ ಸಾಮಾಜಿಕ ಜಾಲತಾಣದ ಕೆ.ಎಲ್. ಹರೀಶ್, ಕಾಂಗ್ರೆಸ್  ಹಿರಿಯ ಮುಖಂಡ ಎಲ್.ಎಂ. ಹನುಮಂತಪ್ಪ ಉಪಸ್ಥಿತರಿದ್ದರು.

ಮುಖಂಡರಾದ ಬಿ.ಎಂ. ರಾಮಸ್ವಾಮಿ, ಎಂ. ಗುರುಮೂರ್ತಿ, ಶಿವಲಿಂಗಪ್ಪ, ಆದಾಪುರ ನಾಗರಾ ಜಪ್ಪ, ಬಿ.ಎಲ್. ಚಂದ್ರಶೇಖರ್, ಬಿ.ಆರ್. ದುರುಗೇಶ್, ಬಿ.ಆರ್. ಶಿವಮೂರ್ತಿ, ಕಾರ್ಯಕರ್ತರಾದ ಬಿ.ಬಿ. ದುರುಗೇಶ್, ಎಲ್.ಸಿ. ಗಂಗಾಧರ, ಎಲ್.ಸಿ. ಮಹಾಂತೇಶ್, ಶಶಿಕುಮಾರ್, ಮಲ್ಲಿಕಾರ್ಜುನ್, ಬಿ.ಇ. ಹೇಮಂತ್, ಪ್ರವೀಣ್, ಚೇತನ್, ಬಿ.ಡಿ. ಸಂದೀಪ್ ಇನ್ನಿತರರು ಭಾಗವಹಿಸಿದ್ದರು.

Leave a Reply

Your email address will not be published.