ಕೊರೊನಾ ಕರಿನೆರಳಲ್ಲಿ ನಗರ ಸ್ವಚ್ಛತೆ ಮಾಯ

ಕೊರೊನಾ ಕರಿನೆರಳಲ್ಲಿ ನಗರ ಸ್ವಚ್ಛತೆ ಮಾಯ

ಹರಿಹರ ನಗರದಲ್ಲಿ ಕೊರೊನಾ ರೋಗದ ಲಕ್ಷಣಗಳು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವುದರಿಂದ ಅಧಿಕಾರಿಗಳ ಗಮನ ಬರೀ ಕೊರೊನಾ ಸೋಂಕು ತಡೆಯುವ ಕಡೆ ಇರುವುದರಿಂದ ನಗರದ ಸ್ವಚ್ಛತೆ ಕೆಲಸವನ್ನು ಮಾಡಲು ಹಿನ್ನಡೆಯಾಗಿ ನಗರವು ಗಬ್ಬೆದ್ದು ನಾರುತ್ತಿದೆ.

ವಿಶ್ವದಾದ್ಯಂತ ಕೊರೊನಾ ವೈರಸ್ ಸಮಸ್ಯೆಯಿಂದಾಗಿ ಜನರ ಜೀವನದಲ್ಲಿ ಬಹಳ ದೊಡ್ಡ ಪ್ರಮಾಣದ ಏರು ಪೇರು ಆಗಿ ಯಾವ ಸಮಯದಲ್ಲಿ ಏನು ಸಮಸ್ಯೆ ಹುಟ್ಟಿಕೊಳ್ಳುತ್ತದೆಯೋ ಎಂಬ ಆತಂಕದಿಂದ ಜನರು ನೆಮ್ಮದಿ ಇಲ್ಲದೇ ದಿನನಿತ್ಯದ ಜೀವನ ಕಳೆಯುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಈಗಾಗಲೇ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹನ್ನೊಂದಕ್ಕೆ ಏರಿದ್ದು, ಇದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹರಡುವ ಸಾಧ್ಯತೆಗಳು ಇದೆ. ಇದನ್ನು ತಡೆಗಟ್ಟಲು ಹಗಲು ರಾತ್ರಿ ಎನ್ನದೆ ಆರೋಗ್ಯ ಇಲಾಖೆ, ನಗರಸಭೆ, ತಾಲ್ಲೂಕು ಆಡಳಿತ ಸೇರಿದಂತೆ ಹಲವಾರು ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ. 

ಇದಕ್ಕಾಗಿಯೇ ಹೆಚ್ಚು ಶ್ರಮ ಮೀಸಲು ಮಾಡುತ್ತಿರುವುದರಿಂದ ನಗರದ ಹಲವಾರು ಬಡಾವಣೆಯಲ್ಲಿ ಸ್ವಚ್ಛತೆ ಕಾಣದೇ ಇರುವುದರಿಂದ ಮತ್ತು ಚರಂಡಿಗಳು ಕಟ್ಟಿಕೊಂಡು ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಸೊಳ್ಳೆಗಳ ಕಾಟ ತಡೆಯಲು ಆಗುತ್ತಿಲ್ಲ ಮತ್ತು ಮನೆಯಲ್ಲಿ ಕುಳಿತುಕೊಳ್ಳಲು ಆಗದಷ್ಟು ಗಬ್ಬು ವಾಸನೆ ಹರಡಿಕೊಂಡಿದೆ.

ಈ ವಾತಾವರಣದಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುವುದರಿಂದ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ,  ಮಲೇರಿಯಾ ರೋಗಗಳು ಕಾಡಲಿವೆೆ.  ಇಂತಹ ಸಂದ ರ್ಭದಲ್ಲಿ ನಗರವು ಎಷ್ಟು ಸ್ವಚ್ಛತೆ ಇದ್ದರೂ ಕಡಿಮೆಯೇ. ಗಬ್ಬು ವಾಸನೆಯನ್ನು ಬೀರುವ ನೀರಿನ ಗುಂಡಿಗಳು, ಅದರಲ್ಲಿ ಬಿದ್ದು ಹೊರಳಾಡುತ್ತಿರುವ ಹಂದಿಗಳು ಮತ್ತು ಅನೇಕ ಬಡಾವಣೆಗಳ ಚರಂಡಿಗಳು ಸ್ವಚ್ಛತೆ ಕಾಣದೆ ಇರುವುದು ಸಾಮಾನ್ಯವಾಗಿದೆ. 

ನಗರದಲ್ಲಿ ಕೊರೊನಾ ಸೋಂಕು ಹರಡುವಿಕೆ ಇಲ್ಲದ ವೇಳೆಯಲ್ಲಿ ಪ್ರತಿಯೊಂದು ವಾರ್ಡ್‌ಗಳಿಗೂ ರೋಗ ನಿರೋಧಕ ಔಷಧಿಯನ್ನು ಸಿಂಪಡಣೆ ಮಾಡಲಾಗುತ್ತಿತ್ತು. ಆದರೆ, ಈಗ ಕೊರೊನಾ ದಿನದಿಂದ ದಿನಕ್ಕೆ ನಗರದ ಹಲವಾರು ಬಡಾವಣೆ ಗಳಲ್ಲಿ ಹರಡುತ್ತಿದ್ದರೂ ಸಹ ಒಂದೇ ಒಂದು ಬಡಾವಣೆಯಲ್ಲಿ ಸೋಂಕು ನಿವಾರಕ ಔಷಧಿಯನ್ನು ಸಿಂಪಡಣೆ ಮಾಡಲಾಗಿಲ್ಲ. ಮತ್ತು ಸ್ವಚ್ಛತೆ ಕಡೆ ಗಮನ ಕೂಡ ಕಡಿಮೆಯಾಗಿದೆ.

ರೈತರು ಬೆಳೆದಂತಹ ಬೆಳೆಗಳನ್ನು ಅಂತರ ರಾಷ್ಟ್ರೀಯ ಬಂಡವಾಳಗಾರರು ಖರೀದಿ ಮಾಡಲು ಪರವಾನಗಿ ನೀಡುತ್ತಿರುವುದರಿಂದ ಮುಂದೊಂದು ದಿನ ನಮ್ಮ ಭಾಗದ ರೈತರು ಬಹು ರಾಷ್ಟ್ರೀಯ ಕಂಪನಿಗಳ ಕೃಷಿ ಕಂಪನಿಗಳಲ್ಲಿ ಜೀತದಾಳುಗಳಾಗಿ ಕೆಲಸ ಮಾಡುವ ದಿನಗಳು ದೂರವಿಲ್ಲ. ಈ ಕಾನೂನನ್ನು ಜಾರಿಗೆ ತಂದರೆ, ನಮ್ಮ ರೈತರು ಬೀದಿಗೆ ಬೀಳುವುದಲ್ಲದೇ, ಕೃಷಿ ಕಾರ್ಮಿಕರು ಅಭದ್ರತೆಯಲ್ಲಿ ಸಿಲುಕಿ ಪ್ರಾಣ ತ್ಯಾಗ ಮಾಡುವ ಸಂದರ್ಭ ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಬೀಜ ಕಾಯಿದೆಯಿಂದ ನಮ್ಮ ರೈತರ ಕೃಷಿ ಭೂಮಿಗಳು ಮುಂದೊಂದು ದಿನ ಬರಡಾಗಿ ಪರಿವರ್ತನೆ ಆಗುವುದನ್ನು ನೋಡಬಹು ದಾಗಿದೆ. ಕೃಷಿ ಭೂಮಿ ಕ್ರಯ ವಿಚಾರದಲ್ಲಿ ಈಗ ಇರುವ ಕಾನೂನನ್ನು ಸಡಿಲಗೊಳಿಸಿದರೆ, ಇವತ್ತು ಉಳುವವನೇ ಭೂಮಿಯ ಒಡೆಯ ಎನ್ನುವ ಜಾಗದಲ್ಲಿ ಉಳ್ಳವನೇ ಹೊಲದೊಡೆಯ ಎನ್ನುವಂತಾಗುವ ಸಂದರ್ಭ ನೋಡಬಹುದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಐಕೆಎಸ್‍ಬಿಕೆ ಎಂ ಯುನ ಜಿಲ್ಲಾ ಸಂಚಾಲಕರಾದ ಐರಣಿ ಚಂದ್ರು, ಕೆಪಿಆರ್‍ಎಸ್‍ನ ಸಂಚಾಲಕ ಶ್ರೀನಿವಾಸ, ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ಭಗತ್‍ಸಿಂಹ, ತೋಳಹುಣಸೆಯ ಜಯಪ್ಪ, ಶೇಖರ್, ಮಂಜಪ್ಪ ಗೌಡ್ರು, ಕೆ.ಎಂ.ನಾಗರಾಜ್, ಆವರಗೆರೆ ಬಾನಪ್ಪ ಹಾಗೂ ಇತರೆ ರೈತ ಮತ್ತು ಕಾರ್ಮಿಕ ನಾಯಕರು ಇದ್ದರು.


ಎಂ. ಚಿದಾನಂದ ಕಂಚಿಕೇರಿ

Leave a Reply

Your email address will not be published.