ಕಾಂಗ್ರೆಸ್ ಯೋಜನೆಗಳನ್ನು ಮನೆ-ಮನೆಗೆ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರದ್ದು

ಕಾಂಗ್ರೆಸ್ ಯೋಜನೆಗಳನ್ನು ಮನೆ-ಮನೆಗೆ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರದ್ದು

ದಾವಣಗೆರೆ, ಜು.2-  ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಇಂದು ಪದಗ್ರಹಣ ಮಾಡಿದ ಡಿ.ಕೆ. ಶಿವಕುಮಾರ್ ಅವರ ಪ್ರತಿಜ್ಞಾ ದಿನದ   ಸಮಾರಂಭವನ್ನು ಮಾಯಕೊಂಡ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಬ್ಬದ ವಾತಾವರಣದ ಮೂಲಕ ಆಚರಿಸಲಾಯಿತು. 

ಈ ಸಂದರ್ಭದಲ್ಲಿ ಮಾತನಾ ಡಿದ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್. ಬಸವಂತಪ್ಪ,  ಈ ಹಿಂದೆ ಸಿದ್ಧರಾಮಯ್ಯ ಸರ್ಕಾರದ ಅವಧಿ ಯಲ್ಲಿ ಜಾರಿಗೆ ತಂದಿರುವ ಅನ್ನ ಭಾಗ್ಯ, ಕ್ಷೀರಭಾಗ್ಯ, ಪ.ಜಾ, ಪ.ಪಂ. ವಿದ್ಯಾರ್ಥಿಗಳಿಗೆ ವಿಶೇಷ ಅನುದಾನ ಕಲ್ಪಿಸಿ ಉನ್ನತ ವ್ಯಾಸಂಗಕ್ಕೆ ನೆರವಾಗಿ ರುವುದೂ ಸೇರಿದಂತೆ ಮತ್ತಿತರೆ ಯೋಜನೆಗಳನ್ನು ಜನಸಾಮಾನ್ಯರಿಗೆ ನೀಡಿ ಉತ್ತಮ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರದ ಈ ಯೋಜನೆಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ ಎಂದರು.

ಕೆ.ಪಿ.ಸಿ.ಸಿ. ಅಧ್ಯಕ್ಷರ ಪದಗ್ರಹಣ ದಿಂದ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಕಾರ್ಯಕರ್ತರು ಇಂದಿನಿಂದ ಬಿಜೆಪಿ ವಿರುದ್ಧ ಯುದ್ದವನ್ನು ಆರಂಭಿ ಸಿದ್ದೇವೆ. ಈ ಯುದ್ದದಲ್ಲಿ ಕಾರ್ಯ ಕರ್ತರು ಶ್ರಮ ವಹಿಸಿ ಜನರ ವಿಶ್ವಾಸ ಗಳಿಸಿ ಗುರಿ ಮುಟ್ಟಬೇಕೆಂದರು.

ಪದಗ್ರಹಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಡ್ಡಿಪಡಿಸಿ ದರೂ,   ಹಬ್ಬದ ವಾತಾವರಣದ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಜ್ಞಾ ದಿನದಲ್ಲಿ ಭಾಗವಹಿಸಿ ರುವುದು ಹೆಮ್ಮೆಯಾಗುತ್ತಿದೆ. ರಾಜ್ಯದಲ್ಲಿ   ಮೆಕ್ಕೆಜೋಳ, ಭತ್ತ ಮತ್ತಿತರೆ ಧಾನ್ಯಗಳನ್ನು ಬೆಂಬಲ ಬೆಲೆಯಲ್ಲಿ ಖರೀಸದೇ ರೈತರನ್ನು ಸಂಕಷ್ಟಕ್ಕೆ ದೂಡಿ ರೈತರ ಹಿತವನ್ನು ಕಾಪಾಡುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದರು.

ಮಾಯಕೊಂಡ ಕ್ಷೇತ್ರದ ಒಟ್ಟು 44 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಜೂಮ್ ಆಪ್ ಮೂಲಕ ಡಿ.ಕೆ. ಶಿವಕುಮಾರ್ ಅವರ ಪ್ರತಿಜ್ಞಾ ದಿನದ ಕಾರ್ಯಕ್ರಮವನ್ನು ವೀಕ್ಷಿಸಲಾಯಿತು. 

ಬಸವಾಪಟ್ಟಣದ ಹಾಲಸ್ವಾಮಿ ಗದ್ದಿಗೆ ಮಠದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ನಾಗ ರಾಜ್, ತಾಲ್ಲೂಕು ಪಂಚಾ ಯತ್ ಸದಸ್ಯರಾದ ಹರೋಸಾಗರ ಜ್ಯೋತಿ ಪ್ರಕಾಶ್, ವೀಕ್ಷಕರಾದ ಶಿವನಾಯ್ಕ, ಚನ್ನಪ್ಪ ಗೌಡ್ರು, ಗಂಗಪ್ಪ, ಯುವ ಮುಖಂಡರಾದ ವಿನೋದ, ಎಂ.ಪಿ.ಎಂ. ಪರಶುರಾಮ್, ಶಶಿಕುಮಾರ್ ಹೆಚ್., ಅಯೂಬ್, ಯೂನೂಸ್ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published.