ಪರಿಷತ್ ಸದಸ್ಯರನ್ನಾಗಿಸಬೇಕು

ದಾವಣಗೆರೆ, ಜು.1- ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಬಿಜೆಪಿ ಹಾಗೂ ಸಂಘ ಪರಿವಾರದ ವಿವಿಧ ಸಂಘಟನೆಗಳ ಸಂಪರ್ಕದಲ್ಲಿದ್ದು ಪಕ್ಷಕ್ಕಾಗಿ ದುಡಿದಿರುವ ನಮ್ಮಿಬ್ಬರಲ್ಲಿ ಯಾರಾದರೊಬ್ಬರನ್ನು ಸರ್ಕಾರವು ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮಕರಣ ಮಾಡಬೇಕೆಂದು ಕೆ.ಎನ್. ಓಂಕಾರಪ್ಪ ಹಾಗೂ ಎಂ.ಪಿ. ಕೃಷ್ಣಮೂರ್ತಿ ಪವಾರ್ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಧಿಕಾರ ವಿಕೇಂದ್ರೀಕರಣ ಬೆಂಗಳೂರಿಗೆ ಮಾತ್ರ ಸೀಮಿತವಾಗಿದೆ. ಬೆಂಗಳೂರಿನಲ್ಲಿ ಮಧ್ಯ ಕರ್ನಾಟಕ ದಾವಣಗೆರೆ ಬಗ್ಗೆ ದನಿ ಎತ್ತುವ ಅಗತ್ಯವಿದೆ  ಎಂದರು.

ಮತ್ತೋರ್ವ ಮುಖಂಡ ಆರ್.ಪ್ರತಾಪ್, ರಾಜ್ಯಸಭೆಗೆ ಮೂಲ ಕಾರ್ಯಕರ್ತರನ್ನು ಆಯ್ಕೆ ಮಾಡುವುದು ಕಾರ್ಯಕರ್ತರಲ್ಲಿ ಉತ್ಸಾಹ ತಂದಿದೆ. ಅದೇ ರೀತಿ ವಿಧಾನಪರಿಷತ್‌ಗೂ ಮೂಲ ಕಾರ್ಯಕರ್ತರನ್ನೇ ಆಯ್ಕೆ ಮಾಡಲಿ ಎಂದು ಕೇಳಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ರವೀಂದ್ರ, ರಣಜಿತ್ ಸಿಂಗ್, ಡಿ.ಬಸವರಾಜ ಗುಬ್ಬಿ ಉಪಸ್ಥಿತರಿದ್ದರು.

Leave a Reply

Your email address will not be published.