ಸ್ಫೂರ್ತಿಯ ಸಲಾಕೆ ಪತ್ರಿಕೆ…!

ಸ್ಫೂರ್ತಿಯ ಸಲಾಕೆ ಪತ್ರಿಕೆ…!

ದಿನವೂ ಸುದ್ದಿಯನೊತ್ತು ತರುವುದು ಪತ್ರಿಕೆ
ವಿಶ್ವದೆಲ್ಲೆಡೆಯ ಘಟನೆಗಳೆಲ್ಲ ಇಲ್ಲಿ ಬಿತ್ತರಿಕೆ
ಸತ್ಯ ಮೌಲ್ಯವ ಸಾರುವುದು ಇದರ ಹೆಗ್ಗಳಿಕೆ
ಎಲ್ಲರ ಮನಸೆಳೆವ ನವನವೀನ ಚೆಲುವಿಕೆ !

ತಪ್ಪುಹಾದಿಯಲಿ ನಡೆವರ ಕುಟ್ಟುವ ಒನಕೆ
ಕುತಂತ್ರಿಗಳಿಗೆ ಮಣಿಯದ ಎದೆಗಾರಿಕೆ
ಭ್ರಷ್ಟಾಚಾರ ಅಕ್ರಮಗಳಿಗೆ ಭಯದ ಕುಣಿಕೆ
ಒಪ್ಪುವರೆಲ್ಲರೂ ಇದರ ನೀತಿಯ ಮಂತ್ರಕೆ ! 

ಕತೆ, ಕವನ, ಲೇಖನ ಪ್ರಕಟಿಸುವ ವೇದಿಕೆ
ಕಲೆ, ಕ್ರೀಡೆ, ಕೃಷಿ, ಶುಭನುಡಿಗಳ ಹೊದಿಕೆ
ಕೊಡುವುದೆಮಗೆ ಮುಂಜಾನೆಯ ಚೇತರಿಕೆ
ಓದಿದಾಗ ಆಹ್ಲಾದ, ರಂಜನೆ, ಜ್ಞಾನದ ಗಳಿಕೆ !

ಐತಿಹಾಸಿಕ ಸ್ಥಳ, ಸಂಗತಿ ಬಿಂಬಿಸುವ ಸ್ಮರಣಿಕೆ
ಸದಾ ನ್ಯಾಯದ ಪರ ನಿಲ್ಲುವ ಹೃದಯವಂತಿಕೆ
ಗಳಿಸಿದೆ ತನ್ನ ವೈಖರಿಯಿಂದ ಎಲ್ಲರ ನಂಬಿಕೆ
ಸ್ಪಂದನ, ಜಾಗೃತಿ, ಪ್ರಗತಿಪರ ಪತ್ರಿಕಾ ಬಳಗಕೆ
ಪತ್ರಿಕಾ ದಿನದ ಪ್ರೀತಿಯ ಶುಭಾಶಯಗಳು.


ಥಾಮಸ್ ಎ.
ಶಿಕ್ಷಕರು, ಹರಿಹರ.  9449364585
thomasarul05@gmail.com

Leave a Reply

Your email address will not be published.