ವೈದ್ಯ

ವೈದ್ಯ

ಹತ್ತಾರು ವರುಷಗಳ
ಉನ್ನತ ವಿದ್ಯೆ
ಕಲಿತ ಮೇಲೆ ಆಗಿಹರು
ನುರಿತ ವೈದ್ಯ.

ಹಗಲು ರಾತ್ರಿ
ಎನ್ನದ ಶ್ರಮಜೀವಿ
ಮನುಜನ ದೇಹ
ಬಲ್ಲ ಮೇಧಾವಿ.

ನಾಡಿ ಹಿಡಿದು
ನೋಡುವ ಇವರಿಂದ
ನಾಡಿಗೇ ಆರೋಗ್ಯ

ಎಲ್ಲರಿಗೂ ರೋಗಗಳಿಂದ
ಗುಣವಾಗುವ ಭಾಗ್ಯ.

ಏರುಪೇರಾದಾಗ
ನಮ್ಮಯ ದೇಹ
ತುಂಬುವರು ಧೈರ್ಯ
ಸ್ಥೈರ್ಯದಿ ಉತ್ಸಾಹ.

ಕಟ್ಟಲಾರೆವು ನಿಮ್ಮ
ಸೇವೆಗೆ ಬೆಲೆಯ
ಕಟ್ಟಿಕೊಡುವಿರಿ ನೀವು
ಆರೋಗ್ಯದ ನೆಲೆಯ.


ಮಹಾಂತೇಶ ಮಾಗನೂರ
ಬೆಂಗಳೂರು.
mmbaraha@gmail.com

Leave a Reply

Your email address will not be published.