ತೈಲ ಬೆಲೆ ಏರಿಕೆ : ಕಾಂಗ್ರೆಸ್‌ ಪ್ರತಿಭಟನೆ

ತೈಲ ಬೆಲೆ ಏರಿಕೆ : ಕಾಂಗ್ರೆಸ್‌ ಪ್ರತಿಭಟನೆ

ಹರಪನಹಳ್ಳಿ, ಜೂ.29- ಸತತವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ, ಪಟ್ಟಣದಲ್ಲಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ಪ್ರವಾಸಿ ಮಂದಿರ ವೃತ್ತದಲ್ಲಿ ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರು, ಪ್ರತಿ ದಿನ ತೈಲ ಬೆಲೆ ಏರಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕ್ರಮವನ್ನು ಖಂಡಿಸಿದರು.

ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು ಮಾತನಾಡಿ, ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಜನರಿಗೆ ಇಲ್ಲ ಸಲ್ಲದ ಸುಳ್ಳು ಆಶ್ವಾಸನೆ ನೀಡಿ, ಬಿಜೆಪಿ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿತು. ಪೆಟ್ರೋಲ್ ಹಾಗೂ ಡೀಸೆಲ್‌ ಅನ್ನು ಕಡಿಮೆ ಬೆಲೆಯಲ್ಲಿ ನೀಡುವುದಾಗಿ ಅಂದು ಭರವಸೆ ನೀಡಿತ್ತು. ಆದರೆ, ಇಂದು ಬೆಲೆ ಗಗನಕ್ಕೆ ಏರಿಸಿ ಕೊಟ್ಟ ಮಾತು ತಪ್ಪಿದೆ ಎಂದು ದೂರಿದರು.

ರವಿ ಯುವ ಶಕ್ತಿ ಅಧ್ಯಕ್ಷ ಉದಯಶಂಕರ್‌, ಮತ್ತೂರು ಬಸವರಾಜ್‌, ಮತ್ತಿಹಳ್ಳಿ ರಾಮಣ್ಣ, ಗೋಣೆಪ್ಪ, ನಿಟ್ಟೂರು ಸೋಮಣ್ಣ, ಹುಚ್ಚಪ್ಪ, ಕವಿತಾ ಸುರೇಶ್ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published.