ಹರಿಹರದಲ್ಲಿ ಓರ್ವ ವೃದ್ಧನಿಗೆ ಸೋಂಕು ಧೃಡ

ಹರಿಹರದಲ್ಲಿ ಓರ್ವ ವೃದ್ಧನಿಗೆ ಸೋಂಕು ಧೃಡ

ಹರಿಹರ, ಜೂ.28- ಗಂಗಾ ನಗರದ ಕೊರೊನಾ ಸೋಂಕು ತಗುಲಿರುವ ಸುಮಾರು 65 ವರ್ಷದ ವ್ಯಕ್ತಿಯನ್ನು ಕರೆತಂದು ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

ನಗರಸಭೆಯಿಂದ ನಿನ್ನೆ ನಗರದಲ್ಲಿ ಇರುವ 50 ವರ್ಷ ಮೇಲ್ಪಟ್ಟ ವಯಸ್ಸಿನವರನ್ನು ಕೊರೊನಾ ಟೆಸ್ಟ್‌ಗೆ ಒಳಪಡಿಸಲಾಗಿತ್ತು. ಅದರಲ್ಲಿ  ಹಾವೇರಿ ಜಿಲ್ಲೆಯ ಬರಡಿ ಗ್ರಾಮದಿಂದ ಗಂಗಾನಗರದ ಮಗಳ ಮನೆಗೆ ಬಂದಿದ್ದ ಸುಮಾರು 65 ವರ್ಷದ ವೃದ್ಧನಿಗೆ ಕೊರೊನಾ ರೋಗ ಲಕ್ಷಣಗಳು ಇರುವುದು ಕಂಡು ಬಂದಿರುತ್ತದೆ. ಅವರನ್ನು ಕರೆತಂದು ಚಿಕಿತ್ಸೆಗೆ ದಾಖಲು ಮಾಡಿ ಅವರ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಸಾರ್ವಜನಿಕರು ಓಡಾಡದಂತೆ ಪೊಲೀಸ್ ಬ್ಯಾರಿಕೇಡ್ ಹಾಕಿ ಸೀಲ್ ಡೌನ್ ಮಾಡಲಾಗಿದೆ ಮತ್ತು ಇವರ ಸಂಪರ್ಕವನ್ನು ಹೊಂದಿದ್ದ 7  ಜನರಿಗೆ ತಪಾಸಣೆ ಮಾಡಲಾಗಿದ್ದು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಕಾವಲುಗಾರ ವೃತ್ತಿಯನ್ನು ಮಾಡುತ್ತಿದ್ದ ಮಹಿಳೆಗೆ ಮೊನ್ನೆ ಕೊರೊನಾ ರೋಗದ ಲಕ್ಷಣಗಳು ಕಂಡು ಬಂದಿದ್ದರಿಂದ ಅವರ ಸಂಪರ್ಕದಲ್ಲಿದ್ದ ಆರು ಜನರಿಗೆ ತಪಾಸಣೆ ಮಾಡಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ಸ್ಥಳಕ್ಕೆ ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ, ನಗರಸಭೆ ಪೌರಾಯುಕ್ತರಾದ ಶ್ರೀಮತಿ ಎಸ್. ಲಕ್ಷ್ಮಿ, ಆರೋಗ್ಯಾಧಿಕಾರಿ ಡಾ. ಚಂದ್ರಮೋಹನ್, ಎಂ‌.ವಿ. ಹೊರಕೇರಿ, ಹೆಚ್.ಜಿ. ಹೇಮಂತ್, ಉಮ್ಮಣ್ಣ, ವಿಮಲಾನಾಯ್ಕ್ ಇತರರು ಭೇಟಿ ಕೊಟ್ಟು ಮುಂದಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು.

Leave a Reply

Your email address will not be published.