ನಮ್ಮ ಸೈನಿಕರು

ನಮ್ಮ ಸೈನಿಕರು

ದೇಶದ ಗಡಿಯಲಿ
ಹಗಲಿರುಳೆನ್ನದೆ
ರಾಷ್ಟ್ರ ಕಾಯುವರು
ನಮ್ಮ ಸೈನಿಕರು.

ದೇಶಕ್ಕಾಗಿ ಪ್ರಾಣವ ತೆತ್ತು
ರಾಷ್ಟ್ರ ರಕ್ಷಣೆ ಮಾಡುವರು
ರಕ್ತನರನಾಡಿಯಲಿ
ರಾಷ್ಟ್ರಭಕ್ತಿಯ ಹೊಂದಿಹರು.

ದೇಶವೇ ಅವರ ಉಸಿರು
ಅವರಿಂದ ದೇಶದ ಹಸಿರು
ಭಾರತ ಮಾತೆಯೇ ರಕ್ಷಿಸು
ನಮ್ಮ ವೀರಯೋಧರನು.

ರಾಷ್ಟ್ರವೇ ಯೋಧರ ಕುಟುಂಬ
ಪ್ರಜೆಗಳ ರಕ್ಷಣೆ ಅವರ ಕರ್ತವ್ಯ
ರಾಷ್ಟ್ರವೇ ನಮಿಸುವುದು
ವೀರ ಯೋಧರಿಗೆ ನಮನ.

ಭಾರತೀಯ ಮಡಿಲಲ್ಲಿ
ವೀರಪುತ್ರರು ಹುಟ್ಟಿ ಬರಲಿ
ದೇಶ ಸೇವೆಯ ಮಾಡುತ್ತಿರಲಿ
ನಿಮ್ಮ ಸೇವೆಗೆ ನಾವು ಋಣಿಗಳು.

ವಂದಿಸುವೆ; ಅಭಿನಂದಿಸುವೆ
ನಿಮ್ಮ ಸೇವೆಯ ನೆನೆಯುತ
ರಾಷ್ಟ್ರಕ್ಕಾಗಿ ಪ್ರಾಣತೆತ್ತ
ವೀರಯೋಧರಿಗೆ ಭಾವಪೂರ್ಣ
ಶ್ರದ್ಧಾಂಜಲಿ ಅರ್ಪಿಸುತಾ.


ಜೆಂಬಗಿ ಮೃತ್ಯುಂಜಯ
ಕನ್ನಡ ಉಪನ್ಯಾಸಕರು, ದಾವಣಗೆರೆ.

Leave a Reply

Your email address will not be published.