ನಗರದ ಒಂದೇ ಕುಟುಂಬದ ನಾಲ್ವರಿಗೆ ಕೊರೊನಾ

ದಾವಣಗೆರೆ, ಜೂ. 28 – ನಗರದ ತರಳಬಾಳು ಬಡಾವಣೆಯ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಜಿಲ್ಲೆಯ ಆರು ಜನರಲ್ಲಿ ಕೊರೊನಾ ಸೋಂಕಿರುವುದು ಭಾನುವಾರ ಪತ್ತೆಯಾಗಿದೆ.

ಬೆಂಗಳೂರು ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿರುವ ತರಳಬಾಳು ಬಡಾವಣೆ ಕುಟುಂಬದ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹಗೇದಿಬ್ಬ ಸರ್ಕಲ್‌ನಲ್ಲಿ ಕ್ರಮ ರಹಿತ ಪರೀಕ್ಷೆ ನಡೆಸಿದಾಗ ಒಬ್ಬರಲ್ಲಿ ಮತ್ತು ಹಾವೇರಿಗೆ ಪ್ರಯಾಣ ಮಾಡಿದ್ದ ಹರಿಹರದ ಒಬ್ಬರಲ್ಲಿ ಕೊರೊನಾ ಸೋಂಕು ಕಾಣಸಿಕೊಂಡಿದೆ ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದೇ ದಿನದಂದು ಆರು ಜನರು ಕೊರೊನಾದಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇವರಲ್ಲಿ ಐವರು ಚನ್ನಗಿರಿಯವರು ಹಾಗೂ ಒಬ್ಬರು  ದಾವಣಗೆರೆಯ ಆನೆಕೊಂಡದವರಾಗಿದ್ದಾರೆ.

ಜಿಲ್ಲೆಯಲ್ಲಿ ಈಗ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆ 42 ಆಗಿದೆ. 

Leave a Reply

Your email address will not be published.