ಕೊರೊನಾ ಎಂಬ ವಿಷ ಕಣಕೆ ಬಲಿಯಾದೆ ಏತಕೆ?

ಕೊರೊನಾ ಎಂಬ ವಿಷ ಕಣಕೆ ಬಲಿಯಾದೆ ಏತಕೆ?

ಕೊರೊನಾ ಎಂಬ ವಿಷ ಕಣಕೆ ಬಲಿಯಾದೆ ಏತಕೆ?
ಸುಖ ಶಾಂತಿ ನಾಶಕೆ…ಮನುಜಾ…

ಬಂಧು, ಬಳಗ ಜನರು ಎಲ್ಲರೂ
ಮೇಲೆ ಹೋಗಲು ಇನ್ನೆಲ್ಲಿ ಬರುವರು?

ಲಾಕ್‌ಡೌನ್ ಇಲ್ಲದೆ, ದೂರ ನಿಲ್ಲದೆ ಹರಡಿತು
ಈ ರೋಗ ಉಪೇಕ್ಷೆ ಯಿಂದಲೇ…

ಈ ಸಂಚು ಯಾರದೋ? ಆ ಹೊಂಚು ಯಾರದೋ?
ಮನು ಕುಲಕೆ ಈ ನಂಜು ತಗಲಿಸಿ
ನಾಶ ಮಾಡಿದರು ಈ ಲೋಕ ಮಾನವಾ…

ಕೊರೊನಾ ಎಂಬ ವಿಷ ಕಣಕೆ ಬಲಿಯಾದೆ ಏತಕೆ?
ಸುಖ ಶಾಂತಿ ನಾಶಕೆ…ಮನುಜಾ…

ಸೂರ್ಯ, ಚಂದ್ರಾ, ಗಗನಾ, ಜೈವಿಕ ಶೋಧಕರೆಲ್ಲರೂ,
ಈ ಜಗಕೆ ಬಂದರೂ, ಈಗ ಎಲ್ಲಿ ಹೋದರು?

ಎಷ್ಟೇ  ಕಲಿತರೂ, ಏನೇ ಕಲಿತರೂ, ಪ್ರಯೋಜನವಾಗದಾದರು
ಇದಕೆ ಲಸಿಕೆ ಇಲ್ಲವೇ? ಗುಳಿಗೆ ಇಲ್ಲವೇ? ಬೇರೆ ದಾರಿ ಏನಿದೆ?

ಈ ಸಾವು ಎನ್ನುವಾ ಆ ನೋವು ಎನ್ನುವಾ ಸಹಿಸದಾದ ಮಾನವಾ
ಕೊರೊನಾ ಎಂಬ ವಿಷ ಕಣಕೆ ಬಲಿಯಾದೆ ಏತಕೆ?
ಸುಖ ಶಾಂತಿ ನಾಶಕೆ…ಮನುಜಾ…


ಎಂ. ಸಿರ್ಸಿಕರ
ನಿವೃತ್ತ ಸಹಾಯಕ ನಿರ್ದೇಶಕರು
ದಾವಣಗೆರೆ. 9481917335

Leave a Reply

Your email address will not be published.